More

    ಸರ್ಕಾರದ ಸವಲತ್ತು ಸದ್ಬಳಕೆಯಾಗಲಿ

    ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 280 ಮಕ್ಕಳಿಗೆ ಮಂಗಳವಾರ ಎಸ್‌ಡಿಎಂಸಿ ಅಧ್ಯಕ್ಷ ಪಾಪಣ್ಣ ಉಚಿತ ಶೂ ಮತ್ತು ಸಾಕ್ಸ್ ವಿತರಿಸಿದರು.

    ಬಳಿಕ ಮಾತನಾಡಿದ ಅವರು, ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ಉಚಿತವಾಗಿ ವಿತರಿಸುವ ಯಾವುದೇ ಸೌಲಭ್ಯಗಳನ್ನು ಮಕ್ಕಳು ದುರುಪಯೋಗಪಡಿಸಿಕೊಳ್ಳದೆ ಮೌಲ್ಯಾಧಾರಿತವಾಗಿ ಬಳಸಿಕೊಳ್ಳಬೇಕು.

    ಮುಖ್ಯಶಿಕ್ಷಕ ನಾಗಾರ್ಜುನ್ ಮಾತನಾಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ, ಬೈಸಿಕಲ್, ಸಮವಸ್ತ್ರ ಹಾಗೂ ಶೂ-ಸಾಕ್ಸ್‌ಗಳನ್ನು ಉಚಿತವಾಗಿ ವಿತರಿಸುತ್ತ ಬಂದಿದೆ. ಇದನ್ನು ಮಕ್ಕಳು ಸದುಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿಆರ್‌ಪಿ ಸುರೇಶ್ ಮಾತನಾಡಿ, ಸರ್ಕಾರ ನೀಡುವ ವಿವಿಧ ಸವಲತ್ತುಗಳನ್ನು ಮಕ್ಕಳು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಸುಶಿಕ್ಷಿತ ಪ್ರಜೆಗಳಾಗಬೇಕು ಎಂದರು.

    ವಿದ್ಯಾರ್ಥಿನಿಯರಾದ ನಿಧಿ ಮತ್ತು ಹಂಸಿಕ ಪ್ರಾರ್ಥಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಛಾಯಾಕುಮಾರಿ, ನಿರ್ದೇಶಕರಾದ ಮಹದೇವಮ್ಮ, ಗುರುಮೂರ್ತಿ, ಬಸವಣ್ಣ, ಸವಿತಾ, ಸುಧಾ, ರತ್ನಮ್ಮ, ಮುದ್ದುಮಾದಯ್ಯ, ಭಾಗ್ಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts