More

    ಗುಣಮಟ್ಟದ ಆಸ್ಪತ್ರೆಗಳಿಂದ ಆರೋಗ್ಯ ರಕ್ಷಣೆ ಸಾಧ್ಯ, ಶಾಸಕ ಹಾಲಪ್ಪ ಆಚಾರ್ ಅಭಿಮತ

    ಕುಕನೂರು: ಆಸ್ಪತ್ರೆಗಳು ಗುಣಮಟ್ಟದ್ದಾಗಿದ್ದರೆ ಮಾತ್ರ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಾಧ್ಯ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕೊಪ್ಪಳದ ಸರ್ವೋದಯ ಸಂಸ್ಥೆ ಹಾಗೂ ಸಿಂಜೆಂಟಾ ಕಂಪನಿ ವತಿಯಿಂದ 20 ಬೆಡ್ ಹಾಗೂ ಮಂಚಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರುವ ವೈದ್ಯರು, ಸಿಬ್ಬಂದಿ, ಅಸ್ವಚ್ಛತೆ ಇದ್ದರೆ ಅದು ಆಸ್ಪತ್ರೆ ಎಂದು ಅನಿಸಿಕೊಳ್ಳುವುದಿಲ್ಲ. ಜನರನ್ನು ಸಾಯಿಸುವ ಕಸಾಯಿ ಖಾನೆ ಎಂದು ಹೇಳಬೇಕಾಗುತ್ತದೆ ಎಂದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯರೊಬ್ಬರು ಹಲವಾರು ವರ್ಷಗಳಿಂದ ಆಸ್ಪತ್ರೆಗೆ ಬಾರದೆ ವೇತನ ಪಡೆಯುತ್ತಿದ್ದರು. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿರಲಿಲ್ಲ. ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ವೈದ್ಯ ವರ್ಗಾವಣೆಯಾದರು. ಆಸ್ಪತ್ರೆಗೆ ಬಾರದ ವೈದ್ಯರಿಗೆ ಬೆಂಗಾವಲಾಗಿದ್ದ ಇತರ ಇಬ್ಬರು ವೈದ್ಯರನ್ನೂ ವರ್ಗಾವಣೆ ಮಾಡಿಸಿದ್ದೇನೆ. ಪಟ್ಟಣದ ಆಸ್ಪತ್ರೆಯನ್ನು ಮಾದರಿ ಮಾಡುವ ಗುರಿ ಹೊಂದಿದ್ದೇನೆ ಎಂದು ಶಾಸಕ ಆಚಾರ್ ಹೇಳಿದರು.

    ಟಿಎಚ್‌ಒ ಮಂಜುನಾಥ ಬ್ಯಾಲಹುಣಸಿ, ಸರ್ವೋದಯ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ, ಸಿಂಜೆಂಟಾ ಕಂಪನಿ ಪ್ರತಿನಿಧಿ ರಾಜಶೇಖರ ಕಟಗಿ, ಸಿಪಿಐ ನಾಗರೆಡ್ಡಿ, ತಾಪಂ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ ನಾಗಲಾಪೂರಮಠ, ಕಳಕಪ್ಪ ಕಂಬಳಿ, ಪ್ರಮುಖರಾದ ಶರಣಪ್ಪ ಬಣ್ಣದಬಾವಿ, ಬಸವನಗೌಡ ತೊಂಡಿಹಾಳ, ಸಿದ್ಲಿಂಗಯ್ಯ ಉಳ್ಳಾಗಡ್ಡಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts