More

    ರೋಟರಿ ಕಾರ್ಯ ಸಮಾಜಕ್ಕೆ ಅನುಕೂಲ

    ತರೀಕೆರೆ: ರೋಟರಿ ಕ್ಲಬ್ ಕೈಗೊಳ್ಳುತ್ತಿರುವ ಕಾರ್ಯ ಸಮಾಜಕ್ಕೆ ಅನುಕೂಲವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

    ರೋಟರಿಯಿಂದ ಏರ್ಪಡಿಸಿದ್ದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯಿಂದ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಲಭಿಸಿದೆ. ಪ್ರತಿವರ್ಷ ಅಧಿಕಾರ ವಹಿಸಿಕೊಳ್ಳುತ್ತಿರುವ ಪದಾಧಿಕಾರಿಗಳು ಉತ್ತಮ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ರೋಟರಿ ಕೊಡುಗೆ ಸಮಾಜಕ್ಕೆ ನಿರಂತರವಾಗಿರಬೇಕು ಎಂದರು.
    ಪಟ್ಟಣದ ರೋಟರಿ ಶಾಲೆ ಈವರೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿದೆ. ಶಾಲೆ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಅನುದಾನ ಸದ್ಯದಲ್ಲೇ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
    ನಿಕಟಪೂರ್ವ ಅಧ್ಯಕ್ಷ ಎಚ್.ಒ.ದಯಾನಂದ್ ಮಾತನಾಡಿ, ಒಂದು ವರ್ಷದ ಅವಧಿಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿರುವ ಆತ್ಮತೃಪ್ತಿ ಇದೆ. ರೋಟರಿಯಿಂದ ನಾಯಕತ್ವ ಗುಣ ಬೆಳೆಸಿಕೊಂಡಿದ್ದೇನೆ ಎಂದರು.
    ನೂತನ ಅಧ್ಯಕ್ಷ ಪಿ.ಶಶಿಕುಮಾರ್ ಮಾತನಾಡಿ, ಸದಸ್ಯರೆಲ್ಲರ ವಿಶ್ವಾಸದಿಂದ ಸಿಕ್ಕಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ಶೈಕ್ಷಣಿಕ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಲಾಗುವುದು ಎಂದು ಹೇಳಿದರು.
    2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 12 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
    ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಎ. ಶೆಟಿ,್ಟ ರೋಟರಿ ಅಸಿಸ್ಟೆಂಟ್ ಗೌರ್ನರ್ ಕೆ.ಬಿ.ಅನಂತೇಗೌಡ, ಕಾರ್ಯದರ್ಶಿ ಕೆ.ನವೀನ್‌ರಾಜ್, ಮಾಜಿ ಅಧ್ಯಕ್ಷ ಟಿ.ಆರ್.ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts