More

    ಎರಡೇ ತಿಂಗಳಲ್ಲಿ ಕಿತ್ತೆದ್ದ ಹಾಲಕೆರೆ – ಅಬ್ಬಿಗೇರಿ ರಸ್ತೆ!

    ನರೇಗಲ್ಲ: ಗ್ರಾಮೀಣ ಭಾಗಗಳ ರಸ್ತೆ ಸುಧಾರಣೆಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಗ್ರಾಮ ಸಡಕ್ ಯೋಜನೆಯ ಕಾಮಗಾರಿ ಕಳಪೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಕಾಣುತ್ತಿವೆ.

    ನರೇಗಲ್ಲ ಸಮೀಪದ ಹಾಲಕೆರೆಯಿಂದ ಅಬ್ಬಿಗೇರೆಯವರೆಗೆ ಕಳೆದ ಎರಡು ತಿಂಗಳ ಹಿಂದೆ ನಿರ್ವಿುಸಿರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ರಸ್ತೆ ಎರಡೇ ತಿಂಗಳಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿದೆ.

    2022ರ ಜನವರಿಯಲ್ಲಿ ಹಾಲಕೆರೆ- ಬೂದಿಹಾಳ- ಅಬ್ಬಿಗೇರಿ 20 ಕಿ.ಮೀ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 9.29 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ವಣಕ್ಕೆ ಅಂದಿನ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದ್ದರು. ಕಾಲಮಿತಿಯೊಳಗೆ ರಸ್ತೆ ನಿರ್ಮಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ, ಕಾಲಮಿತಿ ಮುಗಿದು 6 ತಿಂಗಳ ನಂತರ ಕಾಮಗಾರಿ ಜತೆಗೆ ಕಳಪೆ ಮಟ್ಟದಲ್ಲಿ ರಸ್ತೆ ನಿರ್ವಿುಸಿ ಕಲ್ಲಿನ ಕಡಿಗಳ ಮೇಲೆ ಡಾಂಬರ್ ಲೇಪನ ಮಾಡಿದ್ದಾರೆ. ಕಳಪೆಯಿಂದಾಗಿ ರಸ್ತೆ ನಿರ್ವಣವಾದ ದಿನದಿಂದಲೇ ಅಲ್ಲಲ್ಲಿ ಕಿತ್ತು ಹೋಗುತ್ತಲೇ ಇದೆ.

    ಹೊಸ ರಸ್ತೆ ನಿರ್ವಣಕ್ಕೆ ಆಗ್ರಹ: ಹೊಸದಾಗಿ ಅಭಿವೃದ್ಧಿಯಾದ ರಸ್ತೆಯಲ್ಲಿ ಗುಂಡಿಗಳು ನಿರ್ವಣವಾಗಿವೆ. ಅಲ್ಲಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಅನೇಕರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲೂ ಬೈಕ್ ಸವಾರರಿಗೆ ಬಹುದೊಡ್ಡ ಫಜೀತಿ ತಂದೊಡ್ಡುತ್ತಿದೆ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಆದ್ದರಿಂದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲು ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಬೇಕು ಹಾಗೂ ರಸ್ತೆಯನ್ನು ಮರಳಿ ಅಭಿವೃದ್ಧಿಪಡಿಸಬೇಕು ಎಂದು ಹಾಲಕೆರೆ, ನಿಡಗುಂದಿಕೊಪ್ಪ, ನರೇಗಲ್, ಬೂದಿಹಾಳ ಗ್ರಾಮಸ್ಥರು ಆಗ್ರಹಿಸಿದರು.

    ಹಾಲಕೆರೆ-ಅಬ್ಬಿಗೇರಿ ರಸ್ತೆ ಕಾಮಗಾರಿಯು ಪ್ರಾರಂಭದಿಂದಲೇ ಕಳಪೆಯಿಂದ ಕೂಡಿತ್ತು. ನಮ್ಮ ಸಂಘದಿಂದ ಸ್ಥಳ ಪರಿಶೀಲನೆ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. 9 ಕೋಟಿ ರೂ. ಮೊತ್ತ ಸಾಮಾನ್ಯವಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಕಾಮಗಾರಿಯು ಈ ಪ್ರಮಾಣದಲ್ಲಿ ಕಳಪೆಯಾಗಲು ಯಾರು ಕಾರಣ? ಕಾಮಗಾರಿಯ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ರಸ್ತೆಯನ್ನು ಮರು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ, ಪ್ರತಿಭಟನೆ ಕೈಗೊಳ್ಳಲಾಗುತ್ತದೆ. – ಸಂತೋಷ ಮಣ್ಣೊಡ್ಡರ, ಅಧ್ಯಕ್ಷ ಚಂದ್ರಮೌಳೇಶ್ವರ ಕಟ್ಟಡ ಕಾರ್ವಿುಕರ ಸಂಘ ನರೇಗಲ್ಲ

    ಹಾಲಕೆರೆ- ಅಬ್ಬಿಗೇರಿ ರಸ್ತೆ ಕಾಮಗಾರಿಯು ಕಳಪೆಯಾದ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ತಿಳಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. – | ಜಿ.ಎಸ್. ಪಾಟೀಲ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts