More

    ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವದ ಘನತೆ ಹೆಚ್ಚಳ ಎಂದು ವಿಜಯನಗರ ಜಿಪಂ ಸಿಇಒ ಬಿ.ಸದಾಶಿವ ಪ್ರಭು

    ಹಗರಿಬೊಮ್ಮನಹಳ್ಳಿ: ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡುವುದರಿಂದ ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ ಹೆಚ್ಚುತ್ತದೆ ಎಂದು ವಿಜಯನಗರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಬಿ.ಸದಾಶಿವ ಪ್ರಭು ಹೇಳಿದರು.

    ತಾಲೂಕಿನ ವಲ್ಲಭಪುರ ಗ್ರಾಮದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ವತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಮತದಾರರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದರು.

    ಜಿಪಂನ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಪ್ರಸಕ್ತ ವರ್ಷ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾರರ ನೋಂದಣಿ ಕಾರ್ಯ ಹಾಗೂ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಜಿಲ್ಲಾದ್ಯಂತ ಸ್ವೀಪ್ ಕಾರ್ಯಕ್ರಮಗಳು ನಡೆಯುತ್ತಿದೆ. ಅದರಲ್ಲೂ ಜಾತ್ರೆ, ಉತ್ಸವ, ಶಾಲಾ-ಕಾಲೇಜು, ನರೇಗಾ ಕಾಮಗಾರಿ ಸ್ಥಳಗಳಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತಿವೆ ಎಂದರು.

    ಬಳಿಕ ಮುರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತಗಟ್ಟೆ ಪರಿಶೀಲಿಸಿದ ಜಿಪಂ ಸಿಇಒ ಬಿ.ಸದಾಶಿವ ಪ್ರಭು, ಶಾಲೆಯ ಅಡುಗೆ ಕೋಣೆಯನ್ನು ವೀಕ್ಷಿಸಿ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದಿದ್ದು ವಿಶೇಷವಾಗಿತ್ತು.
    ಗ್ರಾಪಂ ಅಧ್ಯಕ್ಷ ವಿ.ಮಂಜುಳಾ ಕಾಳೇಶ್, ಸದಸ್ಯರಾದ ದೊಡ್ಡ ಹುಲುಗಪ್ಪ, ರೇಖಾ ಸುರೇಶ್, ಚೈತ್ರಾ ಮಲ್ಲಿಕಾರ್ಜುನ, ಹನುಮಂತಪ್ಪ, ಮಲ್ಲಮ್ಮ ಮಾರುತೆಪ್ಪ, ಲಕ್ಷ್ಮೀದೇವಿ ಮಂಜುನಾಥ, ಸಂತೋಷ ಕುಮಾರ್, ತಾಪಂ ಇಒ ಜಿ.ಪರಮೇಶ್ವರಪ್ಪ, ನರೇಗಾ ಎಡಿ ರಮೇಶ್ ಮಹಾಲಿಂಗಪುರ್, ಪಿಡಿಒ ನವೀನ್, ಎಡಿಪಿಸಿ ಬಸವರಾಜ, ಐಇಸಿ ಸಂಯೋಜಕ ವಿಷ್ಣುವರ್ಧನ್, ತಾಂತ್ರಿಕ ಸಂಯೋಜಕ ದೇವೇಂದ್ರನಾಯ್ಕ, ಎಂಐಎಸ್ ಸಂಯೋಜಕ ಶಿವಬಸಪ್ಪ, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ಶಿವಕುಮಾರ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts