More

    ‘ವಿದುರನ ಸ್ಥಾನದಲ್ಲಿ ನಿಂತು ಹೇಳ್ತಿದ್ದೇನೆ ಧೃತರಾಷ್ಟ್ರ ಸ್ಥಾನದಲ್ಲಿರೋ ಯಡಿಯೂರಪ್ಪ ಅರ್ಥ ಮಾಡ್ಕೋಬೇಕು’

    ಮೈಸೂರು: ನಾನು ವಿದುರನ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ಧೃತರಾಷ್ಟ್ರನ ಸ್ಥಾನದಲ್ಲಿರುವ ಯಡಿಯೂರಪ್ಪ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಶಕುನಿಗಳ ಮಾತನ್ನು ಕೇಳಬಾರದು ಎಂದು ಬಿಜೆಪಿ ನಾಯಕ ಎಚ್​. ವಿಶ್ವನಾಥ್​, ಸಿಎಂ ಬಿಎಸ್​ವೈಗೆ ಸಲಹೆ ನೀಡಿದರು.

    ರೈಲು ಹತ್ತಿಸುವವರನ್ನು ದೂರ ಇಡಿ. ನಿಮ್ಮ ಪುತ್ರ ವ್ಯಾಮೋಹವನ್ನು ಬಿಡಿ. ಧೃತರಾಷ್ಟ್ರ ಓರ್ವ ಮೇದಾವಿ. ಮಹಾನ್ ಮಾನವತಾವಾದಿ. ನಾನು ವಿಧುರನಾಗಿ ನಿಮಗೆ ಸಲಹೆ ನೀಡುತ್ತಿದ್ದೇನೆ. ನಾನು ಮಾತನಾಡಿದ್ದು ತಪ್ಪು ಅಂದರೆ ಕ್ರಮ ಕೈಗೊಳ್ಳಿ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

    ರಾಜ್ಯದಲ್ಲಿ ಲಾಕ್‌ಡೌನ್ ವಿಚಾರ ಕುರಿತು ಸೋಮವಾರದಿಂದ ಯಡಿಯೂರಪ್ಪ ಲಾಕ್‌ಡೌನ್ ಮಾಡಲೇಬೇಕು. ಬಾಯಿ ಮಾತಿಗೆ ಹೇಳಬಾರದು. ಬೆಳಗಾವಿಯ ಸುವರ್ಣಸೌಧವನ್ನು 2 ಸಾವಿರ ಬೆಡ್‌ನ ಆಸ್ಪತ್ರೆ ಮಾಡಿ. ಊರಿನಿಂದ ಹೊರಗಡೆ ಇರುವುದರಿಂದ ಅದನ್ನು ತಾತ್ಕಾಲಿಕ ಆಸ್ಪತ್ರೆ ಮಾಡಿ. ವರ್ಷಕ್ಕೆ ಒಮ್ಮೆ ಮಾತ್ರ ಅಲ್ಲಿ ಸದನ ನಡೆಯುತ್ತದೆ. ಅದರ ಬದಲು ಅದನ್ನು ಆಸ್ಪತ್ರೆ ಮಾಡಿ ಜನರಿಗೆ ಒಳ್ಳೆಯದು ಮಾಡಿ ಎಂದರು.

    ಮೈಸೂರಿನಲ್ಲಿ ಕರೊ‌ನಾ ಹೆಚ್ಚಾಗುತ್ತಿರುವ ವಿಚಾರವಾಗಿ, ಸಚಿವ ಎಸ್.ಟಿ. ಸೋಮಶೇಖರ್ ಬರೀ ಅಧಿಕಾರಿಗಳ ಮಾತು ಕೇಳಬೇಡಿ. ನೀವೇ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ ಖಂಡಿತ ಎಂದು ಎಚ್ಚರಿಕೆ ನೀಡಿದರು.

    ಮೈಸೂರಿನ ಡಿಎಚ್‌ಒ ಸಹ ಅಸಾಯಕರಾಗಿದ್ದಾರೆ. ಕರ್ನಾಟಕದ ಆಡಳಿತಗಾರರಿಗೆ ಗರ ಬಡಿದಿದೆ. ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದರು. ನಾವು ಸರ್ಕಾರ ತಂದಿರುವುದಕ್ಕೆ ನಿಮ್ಮನ್ನು ಎಂ.ಎಲ್.ಸಿ. ಮಾಡಿರುವುದು ಎಂಬ ಕೆಲವರ ಹೇಳಿಕೆಗೆ ಮಾತನಾಡುವವರ ಯಾರ ತ್ಯಾಗವೂ ಇಲ್ಲ ಎಂದು ತಿರುಗೇಟು ನೀಡಿದರು.

    ಯಡಿಯೂರಪ್ಪ ವಿರುದ್ಧ ವೈಯಕ್ತಿಕವಾಗಿ ನಾನು ಮಾತನಾಡಿಲ್ಲ. ಶಕ್ತಿಪೀಠದಲ್ಲಿ ಕುಳಿತಿರುವ ಸಿಎಂಗೆ ಮಾತನಾಡಿದೆ. ಶಕ್ತಿಕೇಂದ್ರ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಆ ಶಕ್ತಿ ಕೇಂದ್ರದ ಕಣ್ಣು ಕಿವಿ ಬಗ್ಗೆ ಹೇಳಿದೆ. ಇಬ್ಬರು ಡಿಸಿಗಳಿಗೆ ಶಟಪ್ ಅಂತ ಹೇಳುವ ಧೈರ್ಯ ಸಿಎಂಗೆ ಇಲ್ಲ. ಹೆಚ್ಚಿಗೆ ಮಾತನಾಡಬೇಡಿ ಅಂತ ಹೇಳುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ಅದನ್ನಷ್ಟೇ ನಾನು ಹೇಳಿದ್ದೇನೆ ಎಂದರು.

    ಮಠ ಮಾನ್ಯಗಳಿಗೆ ನೂರಾರು ಕೋಟಿ ರೂಪಾಯಿ ದೇಣಿಗೆ ನೀಡಿದ್ದೀರಾ. ಅವರನ್ನು ವಾಪಸ್ಸು ಕೇಳಿ, ಏಕೆ ಕೇಳುತ್ತಿಲ್ಲ? ಸರ್ಕಾರದ ಖಜಾನೆಯಿಂದ ಕೊಟ್ಟಿದ್ದೀರಿ. ವಾಪಸ್ಸು ಸಹಾಯ ಕೇಳಿ ಎಂದು ವಿಶ್ವನಾತ್​ ಒತ್ತಾಯಿಸಿದರು.

    ಬಿಬಿಎಂಪಿ ಬೆಡ್ ಹಗರಣ ವಿಚಾರವಾಗಿ, ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ? ಒಬ್ಬ ಎಂಪಿ ಈ ಹಗರಣವನ್ನು ಬಯಲು ಮಾಡಬೇಕಾಗಿತ್ತಾ? ಸರ್ಕಾರ ಏನು ಮಾಡುತ್ತಿದೆ? ನಾವು ಸಂಸದ ತೇಜಸ್ವಿ ಸೂರ್ಯ ಅವರನ್ನು ಅಭಿನಂದಿಸಬೇಕು. ಇದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸ ಮಾಡಬಾರದು. ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು.

    ಕರೊನಾ ಲಸಿಕೆ ಪಡೆದುಕೊಂಡು ಸರ್ಕಾರಿ ಮಹಿಳಾ ಅಧಿಕಾರಿ ವಿರುದ್ಧ ನೆಟ್ಟಿಗರ ಆಕ್ರೋಶ..!

    ಅಗಲಿದ ನಟನ ಶೋಕಾಚರಣೆ ವೇಳೆ ಸಭೆಯ ನಡುವೆ ಅಧ್ಯಕ್ಷನ ನೆಕ್ಕಿದ ನಾಯಿಗಳು- ವಿಡಿಯೋ ವೈರಲ್‌

    ಸೆಕ್ಸ್​ ಮೌಂಟೇನ್ ಹಿಂದಿದೆ ಶಾಕಿಂಗ್​ ಸ್ಟೋರಿ: ಇಲ್ಲಿಗೆ ಬಂದವ್ರು ಅಪರಿಚಿತರ ಜತೆ ಸಂಭೋಗ ನಡೆಸಲೇಬೇಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts