More

    ಭವಿಷ್ಯ ರೂಪಿಸಿಕೊಂಡರೆ ಅದುವೇ ಗುರುಕಾಣಿಕೆ

    ಹಟ್ಟಿಚಿನ್ನದಗಣಿ: ಮೊಬೈಲ್‌ಯುಗದಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕಿದೆ. ಇಂದು ಸುಶಿಕ್ಷಿತರಾದವರು ಶಿಕ್ಷಣದೊಂದಿಗೆ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಮಂಗಳೆಪ್ಪ ಹೇಳಿದರು. ಪಟ್ಟಣದ ಹಳೇ ಪಂಚಾಯಿತಿ ಹತ್ತಿರದ ಸಹಿಪ್ರಾ ಮಾದರಿ ಶಾಲೆಯಲ್ಲಿ 1985-86 ಸಾಲಿನ ಏಳನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮೊಬೈಲ್‌ಯುಗದಲ್ಲಿ ನೈತಿಕ ಮೌಲ್ಯಗಳು ಕಡಿಮೆ

    ಈ ಶಾಲೆಯಲ್ಲಿ ಕಲಿತವರು ಡಿವೈಎಸ್ಪಿ, ಬಿಇಒ, ಕಲ್ಯಾಣಾಧಿಕಾರಿಗಳು, ಪಿಡಿಒ ಮತ್ತು ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಕೆಲವರು ಇಲ್ಲೇ ಶಿಕ್ಷಕರಾಗಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಏನೂ ಬಯಸಲ್ಲ. ಉತ್ತಮ ಭವಿಷ್ಯ ರೂಪಿಸಿಕೊಂಡರೆ ಅದುವೇ ಗುರುಕಾಣಿಕೆ ಎಂದರು. ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಜೀವನಸಾಬ್ ಮೂಲಿಮನಿ, ಪ್ರಮೀಳಾಬಾಯಿ, ಬಸ್ಸಮ್ಮ, ಮರಿಯಪ್ಪ, ಹನುಮಂತಪ್ಪ, ಶಿವಯೋಗಪ್ಪ, ಅಮರೇಶ್, ಮಹಿಮೂದ್‌ಪಾಷಾ, ಹಳೆಯ ವಿದ್ಯಾರ್ಥಿಗಳಾದ ಅಮೀನುದ್ದಿನ್, ಅಮರೇಶ್ ತಾಳಿಕೋಟಿ ನಿರ್ವಹಿಸಿದರು.

    ಇದನ್ನೂ ಓದಿ: ಮನ್ಸೂರ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ತ್ರಿಷಾ; ಅಷ್ಟಕ್ಕೂ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts