More

    ಸಾರ್ಥಕ ಬದುಕಿಗೆ ಗುರುವಿನ ಕರುಣೆ ಅಗತ್ಯ

    ಚಿತ್ತಾಪುರ: ಮಾನವನ ಬದುಕು ಸಾರ್ಥಕವಾಗಬೇಕಾದರೆ ಗುರುವಿನ ಕರುಣೆ ಅಗತ್ಯ ಎಂದು ಶಖಾಪುರ ವಿಶ್ವಾರಾಧ್ಯರ ತಪೋವನ ಮಠದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರ ನುಡಿದರು.

    ದಂಡೋತಿಯ ಸ್ಥಾವರಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮ ಶಿವಯೋಗಿಗಳ 74ನೇ ಪುಣ್ಯಸ್ಮರಣೋತ್ಸವ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಮನುಷ್ಯ ಸತ್ಯ, ನಿಷ್ಠೆ, ಧರ್ಮ ಮಾರ್ಗದಲ್ಲಿ ನಡೆದಾಗ ಎಲ್ಲ ಕಷ್ಟಗಳಿಂದ ದೂರವಾಗುತ್ತಾನೆ. ನಿರಂತರ ಗುರು ಸೇವೆ, ಶಿವಧ್ಯಾನ ಮಾಡಬೇಕು ಎಂದರು.

    ಸಿAಧನಕೇರಾ ವಿರಕ್ತ ಮಠದ ಶ್ರೀ ಹೊನ್ನಲಿಂಗ ಸ್ವಾಮೀಜಿ, ಮಳಖೇಡ ದರ್ಗಾದ ಹಜರತ್ ಸೈಯ್ಯದ್ ಮುಸ್ತಫಾ ಖಾದ್ರಿ ಧರ್ಮೋಪದೇಶ ನೀಡಿದರು. ದಂಡೋತಿ ಸ್ಥಾವರ ಮಠದ ಶ್ರೀ ಚನ್ನಬಸಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

    ಪ್ರಮುಖರಾದ ಶಾಂತಯ್ಯ ಸ್ವಾಮಿ, ಲಿಂಗಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ಪ್ರಶಾಂತ್ ಕೇರಿ, ಗಂಗಾಧರ ಕೊಡದೂರ, ಅರ್ಜುನ ಕ್ರಾಂತಿ, ಬಸವರಾಜ ಕಟ್ಟಿ, ಶಿವಲಿಂಗಪ್ಪಗೌಡ ಬಣಮಿ, ಪ್ರಭುಲಿಂಗರೆಡ್ಡಿ ರಾಯಕೋಡ, ಮಲ್ಲು ಸಾಹು ಹಂಗನಳ್ಳಿ, ಸೋಮುಗೌಡ ಹಂಗನಳ್ಳಿ, ಶ್ರೀಶೈಲ ಹಾಗರಗಿ, ಮಲ್ಲಣ್ಣಗೌಡ ಮಾಲಿ ಪಾಟೀಲ್ ಶಕಾಪುರ, ಬಸವರಾಜ ದೇವಣ ಶಕಾಪುರ, ಮಲ್ಲಣ್ಣ ಯೆಲೇರಿ ಶಕಾಪುರ, ವಿಶ್ವನಾಥ ರೆಡ್ಡಿ, ಶರಣಪ್ಪ ಶಿರವಾಳ, ಮರೆಪ್ಪ ಶಿರವಾಳ, ರಾಮಲಿಂಗ ಶಿರವಾಳ, ನಾಗಣ್ಣ ಸಾಹು ಇಂಗಳಗಿ ಇತರರಿದ್ದರು.

    ಸೈದಪ್ಪ ಗವಾಯಿ ಚೌಡಾಪುರ ಸಂಗೀತ ಸೇವೆ ಸಲ್ಲಿಸಿದರು. ರವಿಸ್ವಾಮಿ ಗೋಟುರ ತಬಲಾ ಸಾಥ್ ನೀಡಿದರು. ಶ್ರೀ ಮಹಾಂತಗೌಡ ಪಾಟೀಲ್ ಸೊನ್ನ ನಿರೂಪಣೆ ಮಾಡಿದರು. ಗ್ರಾಮಕ್ಕೆ ಆಗಮಿಸಿದ ಶಖಾಪುರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts