More

    ಸೈಕಲ್ ರೇಸ್‌ನಲ್ಲಿ ಗುರುರಾಜ ಪ್ರಥಮ

    ಹೊನ್ನಾವರ: ರೋಟರಿ ಕ್ಲಬ್ ಆಶ್ರಯದಲ್ಲಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಗೊಡ್ವಿನ್ ಸೈಕಲ್ ರೇಸ್’ನಲ್ಲಿ ಶಿರಸಿಯ ಗುರುರಾಜ ಎನ್. ಹೆಗಡೆ ಪ್ರಥಮ ಬಹುಮಾನ ಪಡೆದರು. ವಿಷ್ಣು ತೋಡ್ಕರ್ ಕಾರವಾರ (ದ್ವಿತೀಯ) ಮತ್ತು ನಾಗರಾಜ ಗೌಡ ಕರ್ಕಿ ತೃತೀಯ ಬಹುಮಾನ ಪಡೆದುಕೊಂಡರು.

    ಆರೋಗ್ಯ ರಕ್ಷಣೆಯಲ್ಲಿ ಸೈಕಲ್ ತುಳಿಯುವುದರ ಮಹತ್ವ ಸಾರುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯು ಹೊನ್ನಾವರದಿಂದ ಪ್ರಾರಂಭವಾಗಿ ಕುಮಟಾ ತಲುಪಿ ಮತ್ತೆ ಹೊನ್ನಾವರಕ್ಕೆ ಬಂದು ಒಟ್ಟು 40ಕಿಮೀ ಕ್ರಮಿಸಿ ಸಂಪನ್ನಗೊಂಡಿತು. ಉಡುಪಿ, ಭಟ್ಕಳ, ಹೊನ್ನಾವರ, ಶಿರಸಿ ಭಾಗದಿಂದ ಸುಮಾರು 70 ಸ್ಪರ್ಧಾಳುಗಳು ಭಾಗವಹಿಸಿದ್ದರು.

    ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಸೇಫ್ ಸ್ಟಾರ್ ಸಂಸ್ಥೆಯ ಅಧ್ಯಕ್ಷ ಜಿ. ಜಿ. ಶಂಕರ, ಸೈಕಲ್ ಚಲಾಯಿಸುವ ಅಭ್ಯಾಸವು ದೈಹಿಕ ವ್ಯಾಯಾಮದ ಜತೆಗೆ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವುದು ಎಂದರು.

    ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಎಸ್. ಫರ್ನಾಂಡಿಸ್, ಗೊಡ್ವಿನ್ ಸೈಕಲ್ ಮಾಲೀಕ ಮಹಮ್ಮದ ಅಖಿಲ್ ಖಾಜಿ, ಹೀರೊ ಸೈಕಲ್ ಏರಿಯಾ ಮ್ಯಾನೇಜರ್ ಇಂತಿಯಾಜ ಗೊಲಸಂಗಿ, ರೋಟರಿ ಪದಾಧಿಕಾರಿಗಳಾದ ಸ್ಟಿಫನ್ ರೊಡ್ರಿಗಸ್, ಮಹೇಶ ಕಲ್ಯಾಣಪುರ, ಎಸ್.ಎಂ. ಭಟ್, ರಂಗನಾಥ ಪೂಜಾರಿ, ಹೆನ್ರಿ ಲಿಮಾ, ಎಸ್.ಎನ್. ಹೆಗಡೆ, ಡಾ. ಆಶಿಕ್ ಹೆಗ್ಡೆ, ಡಾ. ರಾಜೇಶ ಕಿಣಿ ಉಪಸ್ಥಿತರಿದ್ದರು. ದೀಪಕ ಲೋಪಿಸ್ ಸ್ವಾಗತಿಸಿದರು. ರಾಜೇಶ ನಾಯ್ಕ ವಂದಿಸಿದರು. ದಿನೇಶ ಕಾಮತ ನಿರ್ವಹಿಸಿದರು. ಶ್ರೀಕಾಂತ ನಾಯ್ಕ ಇವೆಂಟ್ ಚೇರ್ಮನ್ ಕಾರ್ಯ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಾಕೊಬ್ ಫರ್ನಾಂಡಿಸ್ ನಿರ್ಣಾಯಕರಾಗಿದ್ದರು.

    ಇದಕ್ಕೂ ಮುನ್ನ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ. ಅವರು ಸ್ಪರ್ಧೆ ಉದ್ಘಾಟಿಸಿ ಶುಭಾಶಯ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts