More

    ಅಂಧಕಾರವನ್ನು ಹೋಗಲಾಡಿಸುವ ಗುರು: ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ಹೇಳಿಕೆ

    ಮಂಡ್ಯ: ಗುರು ಎಂಬ ಪದಕ್ಕೆ ವಿಶೇಷವಾಗಿ ಅರ್ಥೈಸಿದರೆ ನಮ್ಮ ಅಂಧಕಾರವನ್ನು ಹೋಗಲಾಡಿಸುವವರು ಎಂದು ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ತಿಳಿಸಿದರು.
    ನಗರದ ಗುರುದೇವ ಲಲಿತಕಲಾ ಅಕಾಡೆಮಿಯಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕಿ ಚೇತನಾ ರಾಧಾಕೃಷ್ಣ ಹಾಗೂ ಸಂಸ್ಥಾಪಕ ರಾಧಾಕೃಷ್ಣ ಅವರನ್ನು ಶಿಷ್ಯ ವೃಂದ ಮತ್ತು ಪಾಲಕರ ಪರವಾಗಿ ಸನ್ಮಾನಿಸಿ ಮಾತನಾಡಿದ ಅವರು, ಗುರು ನಿರಂತರವಾಗಿ ನಮ್ಮಲ್ಲಿ ಪ್ರಭಾವವನ್ನು ಬೀರುತ್ತಲೇ ಇರುತ್ತಾರೆ. ಗುರುಪೂರ್ಣಿಮೆ ಅಧ್ಯಾತ್ಮಿಕ ಮಾತ್ರವಲ್ಲ. ಶೈಕ್ಷಣಿಕ, ಲೌಕಿಕವಾಗಿ ಹಾಗೂ ಸಾರ್ವತ್ರಿಕವಾಗಿ ಎಲ್ಲ ವಿದ್ಯೆ ಕೊಡುವವರನ್ನು ಬ್ರಹ್ಮ ಎಂದು ಕರೆಯುತ್ತೇವೆ ಎಂದರು.
    ಗುರುವಿಗೂ, ಶಿಕ್ಷಕನಿಗೂ ಯಾವುದೇ ಸಂಬಂಧವಿಲ್ಲ. ಶಿಕ್ಷಕ ಎಂದರೆ ಪಾಠ ಹೇಳಿಕೊಡುವವರು, ಗುರು ಎಂದರೆ ನಮ್ಮ ಬದುಕಿಗೆ ಬೇಕಾಗಿರುವ ಎಲ್ಲ ಜ್ಞಾನ ಸಂಪತ್ತನ್ನು ತನ್ನ ನಡೆ-ನುಡಿ ಮೂಲಕ ತೋರಿಸಿಕೊಡುವವರು ಎಂದು ಹೇಳಿದರು.
    ಅಕಾಡೆಮಿ ನಿರ್ದೇಶಕಿ ಚೇತನಾ ರಾಧಾಕೃಷ್ಣ ಮಾತನಾಡಿ, ವೇದಗಳ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆ ಇದೆ. ಯಾವುದೇ ವಿಷಯವನ್ನು ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ. ಭರತನಾಟ್ಯದ ಬಗ್ಗೆ ತಿಳಿದುಕೊಳ್ಳದೆ ಏನು ಮಹಾ ಎಂದು ಹೀಯಾಳಿಸುತ್ತಾರೆ. ಅದಕ್ಕೆ ಗಮನ ಕೊಡದೆ ನಮ್ಮ ಕೆಲಸವನ್ನು ನಾವು ಮಾಡಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
    ಭರತನಾಟ್ಯ ಎಲ್ಲರಿಗೂ ಸಿಗುವ ವಿದ್ಯೆಯಲ್ಲ. ನಿಮ್ಮಲ್ಲಿ ಎಲ್ಲರಿಗೂ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಕಲಾತ್ಮಕ ಅಂಶಗಳಿರಬೇಕು. ಸೃಜನಶೀಲತೆ ನಿಮ್ಮಲ್ಲಿ ಮತ್ತು ಪಾಲಕರಲ್ಲಿ ಇರಬೇಕು. ಆಗ ಮಾತ್ರ ಪರಿಪೂರ್ಣರಾಗಲು ಸಾಧ್ಯ. ಇದಕ್ಕಿಂತ ಹೆಚ್ಚಾಗಿ ಒಳ್ಳೆಯ ಗುರು ಸಿಗಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts