VIDEO | ಸ್ಪಾರ್ಕಲ್ ಗನ್ ಹಿಡಿದು ಪೋಸ್​​​ ಕೊಟ್ಟ ನವ ದಂಪತಿ; ಮುಂದೇನಾಯ್ತು ಗೊತ್ತಾ?

blank

ಮಹಾರಾಷ್ಟ್ರ: ಮದುವೆ ಎಂದರೆ ಸಡಗರ, ಸಂಭ್ರಮದ ದಿನ. ಪ್ರತಿಯೊಬ್ಬರು ತಮ್ಮ ಮದುವೆಯ ಕುರಿತಾಗಿ ಕನಸು ಕಂಡಿರುತ್ತಾರೆ. ಮದುವೆ ಹೀಗೆ ಆಗಬೇಕು ಎಂದು ಕೆಲವು ಪ್ಲ್ಯಾನ್​​ ಕೂಡಾ ಮಾಡಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಹೀಗೆ ವಿಚಿತ್ರವಾದ ಪ್ಲ್ಯಾನ್​​ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

blank

ಮಹಾರಾಷ್ಟ್ರದಿಂದ ವರದಿಯಾಗಿರುವ ವಿಡಿಯೋದಲ್ಲಿ ವಧು-ವರರು ತಮ್ಮ ಮದುವೆಯ ದಿನ ಮಂಟಪದಲ್ಲಿ ಬೆಂಕಿ ಉಗುಳುವ ಗನ್‌ (ಸ್ಪಾರ್ಕಲ್ ಗನ್​) ಗಳೊಂದಿಗೆ ಪೋಸ್ ನೀಡುತ್ತಿದ್ದಾರೆ. ಪರಸ್ಪರ ಪಕ್ಕದಲ್ಲಿ ಪೋಸ್ ಕೊಡುತ್ತಾ, ಬಂದೂಕು ಹಿಡಿದುಕೊಂಡು ಕ್ಯಾಮರಾಗೆ ನಗುತ್ತಾರೆ. ದಂಪತಿ ನಂತರ ತಮ್ಮ ಬಂದೂಕುಗಳನ್ನು ಹಾರಿಸುತ್ತಾರೆ. ಈ ವೇಳೆ ಅವಘಡ ಸಂಭವಿಸಿದೆ.

ಇದನ್ನೂ ಓದಿ:  ಭೀಕರ ಅಪಘಾತ; ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತ್ಯು
ವಧು ಹಿಡಿದಿದ್ದ ಗನ್ ಸ್ಫೋಟಗೊಂಡು ಆಕೆಯ ಮುಖಕ್ಕೆ ಹೊಡೆಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಭಯಭೀತಳಾದ ಅವಳು ಬೇಗನೆ ಗನ್​​ ಬಿಳಿಸಿ ಸುರಕ್ಷತೆಗಾಗಿ ಹರಸಾಹಸ ಮಾಡುತ್ತಿದ್ದಳು, ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಭಯದಿಂದ ತನ್ನ ಕೊರಳಲಿದ್ದ ಮಾಲೆಯನ್ನು ತೆಗೆದುಹಾಕಿದಳು. ಸ್ಥಳದಲ್ಲಿದ್ದವರು ಆಕೆಯ ಸಹಾಯಕ್ಕೆ ಮುಂದಾಗುತ್ತಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್​ ಮೂಲಕವಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇಂಥಹ ಸಾಹಸಕ್ಕೆ ಕೈ ಹಾಕದಿರಿ ಎಂದು ನವ ದಂಪತಿಯಲ್ಲಿ ಮನವಿ ಮಾಡುತ್ತಿದ್ದಾರೆ.

ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ 34 ಕುರಿಗಳು ದುರಂತ ಸಾವು!

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank