More

    ಗುಲ್ಶನ್​ ಕುಮಾರ್​ ಹತ್ಯೆ: 16 ಗುಂಡಿಟ್ಟು ಕೊಂದಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ, ಓರ್ವ ಆರೋಪಿಗೆ ಖುಲಾಸೆ

    ಮುಂಬೈ : ಬಾಲಿವುಡ್​ ಚಿತ್ರ ನಿರ್ಮಾಪಕ, ಟಿ-ಸೀರಿಸ್​ ಮ್ಯೂಸಿಕ್ ಕಂಪೆನಿ ಮಾಲೀಕರಾಗಿದ್ದ ಗುಲ್ಶನ್​ ಕುಮಾರ್​ ಅವರ ಕೊಲೆ ಪ್ರಕರಣದ ಆರೋಪಿ ಅಬುಲ್​ ರೌಫ್​​ ಮರ್ಚೆಂಟ್​ಅನ್ನು ತಪ್ಪಿತಸ್ಥನೆಂದು ಘೋಷಿಸಿದ್ದ ಸೆಷನ್ಸ್​ ಕೋರ್ಟ್​ ತೀರ್ಪನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದೆ. ಮಹಾರಾಷ್ಟ್ರ ಸರ್ಕಾರದ ಅಪೀಲಿನ ಮೇರೆಗೆ ಸೆಷನ್ಸ್​ ಕೋರ್ಟ್​ ಖುಲಾಸೆ ನೀಡಿದ್ದ ಮತ್ತೊಬ್ಬ ಆರೋಪಿ ಅಬ್ದುಲ್ ರಷೀದ್​ಅನ್ನು ಕೂಡ ಅಪರಾಧಿ ಎಂದು ತೀರ್ಪು ನೀಡಿದೆ.

    ಉದ್ಯಮದಲ್ಲಿನ ದ್ವೇಷದಿಂದ ಈ ಕೊಲೆ ಮಾಡಿಸಿದ್ದರು ಎಂದು ಆರೋಪಿಸಲಾಗಿದ್ದ ಟಿಪ್ಸ್​ ಇಂಡಸ್ಟ್ರೀಸ್​ನ ಮಾಲೀಕ ರಮೇಶ್ ತೌರಾನಿ ಅವರ ಖುಲಾಸೆಯನ್ನು ಹೈಕೋರ್ಟ್​ ಎತ್ತಿಹಿಡಿದಿದೆ. ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್​ನ 2002 ರ ಏಪ್ರಿಲ್ 29 ರ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಅಪರಾಧಿಗಳೆಂದು ಸಾಬೀತಾದ ದಾವೂದ್​ ಇಬ್ರಾಹಿಂನ ಸಹಚರ ಎನ್ನಲಾದ ರೌಫ್ ಮರ್ಚೆಂಟ್​​ ​ಮತ್ತು ಅಬ್ದುಲ್ ರಶೀದ್​ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.

    ಇದನ್ನೂ ಓದಿ: ಕೋಲಾರದಲ್ಲಿ ಒಂದೂವರೆ ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!

    ಖ್ಯಾತಿ ಪಡೆದಿದ್ದ ಚಿತ್ರೋದ್ಯಮಿ ಗುಲ್ಶನ್​ ಕುಮಾರ್​ ಅವರಿಗೆ ಅಂಡರ್​ವರ್ಲ್ಡ್​ನಿಂದ ಜೀವ ಬೆದರಿಕೆ ಬಂದಿತ್ತು ಎನ್ನಲಾಗಿದೆ. ತದನಂತರ 1997 ರ ಆಗಸ್ಟ್​ 12 ರಂದು ಮುಂಬೈ ನಗರದ ಜುಹುನಲ್ಲಿ ದೇವಸ್ಥಾನದಿಂದ ಹೊರಬರುತ್ತಿದ್ದ ಕುಮಾರ್​ ಅವರನ್ನು, ಹಾಡುಹಗಲೇ, ಗುಂಡಿಕ್ಕಿ ಸಾಯಿಸಲಾಗಿತ್ತು. ರೌಫ್​ ಮರ್ಚೆಂಟ್​ ಮತ್ತು ಅಬ್ದುಲ್ ರಶೀದ್​ 16 ಬುಲೆಟ್​ಗಳನ್ನು ಹಾರಿಸಿದ್ದು, ಕುಮಾರ್​ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ

    ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts