More

    ಚಿಕ್ಕಕೆರೆ ನೀರು ನುಗ್ಗಿ ಬೆಳೆ, ಮನೆ ಹಾನಿ

    ಗುಳೇದಗುಡ್ಡ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಸಮೀಪದ ಕೆಲವಡಿ ಗ್ರಾಮದ ರಂಗನಾಥ ದೇವಸ್ಥಾನ ಹಿಂಭಾಗದ ಚಿಕ್ಕಕೆರೆ ಸಂಪೂರ್ಣ ತುಂಬಿ ಅಕ್ಕಪಕ್ಕದ ಮನೆಗಳು ಹಾಗೂ ಕೆಲವಡಿ, ತಿಮ್ಮಸಾಗರ, ನಿಂಗಾಪುರ ಗ್ರಾಮಗಳ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ.

    ಇದರಿಂದ ಅಂದಾಜು 20ಕ್ಕೂ ಹೆಚ್ಚು ಎಕರೆ ಹೊಲಗಳಲ್ಲಿನ ಗೋವಿನಜೋಳ, ಸಜ್ಜೆ, ಶೇಂಗಾ, ಉಳ್ಳಾಗಡ್ಡಿ, ಸೂರ್ಯಪಾನ ಮತ್ತಿತರ ಬೆಳೆಗಳು ನೀರಿನಲ್ಲಿ ನಿಂತಿವೆ. ಮಳೆಯಿಂದಾಗಿ ಕೆಲವು ಮನೆಗಳು ಬಿದ್ದಿವೆ. ಅಂತರ್ಜಲ ಹೆಚ್ಚಳವಾಗಿ ಕೆರೆ ಸಮೀಪದ ಮನೆಗಳಲ್ಲಿ ನೀರಿನ ಬುಗ್ಗೆಗಳು ಏಳುತ್ತಿವೆ. ಕೆರೆ ಪಕ್ಕ ಹಾಗೂ ಹೊಸ ಪಂಚಾಯಿತಿ ಕಟ್ಟಡ ಹಿಂದಿರುವ ಅಂದಾಜು 40 ಮನೆಗಳನ್ನು ಬೇರೆಕಡೆ ಸ್ಥಳಾಂತರಿಸಿ ಹೊಸ ಮನೆ ನೀಡಬೇಕು ಎಂದು ನಿಂಗಪ್ಪ ತಳವಾರ, ಪುಂಡಲಿಕ ಪೂಜಾರಿ, ತುಕಾರಾಮ ವಡ್ಡರ, ಕನಕಪ್ಪ ವಡ್ಡರ, ತುಕ್ಕಪ್ಪ ವಡ್ಡರ ಮತ್ತಿತರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಜಿ.ಎಂ. ಕುಲಕರ್ಣಿ, ಪಿಡಿಒ ಗಂಗಾ ಕಾಳಗಿ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ ಭೇಟಿ ನೀಡಿ ಪರಿಶೀಲಿಸಿದರು.

    ಕೆರೆ ನೀರು ಹೊರಗೆ ಹರಿಯದೆ ಕೋಡಿಯಲ್ಲಿ ಸರಾಗವಾಗಿ ಹೋಗುವಂತೆ ಕ್ರಿಯಾಯೋಜನೆ ರೂಪಿಸಿ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಅನುಮೋದನೆ ಆದ ನಂತರ ಕಾಮಗಾರಿ ಮಾಡಲಾಗುವುದು. ಹೊಲಗಳ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಸತೀಶ ನಾಯಕ, ತಾಪಂ ಇಒ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts