More

    ಒಂದೇ ದಿನ 31 ಕರೊನಾ ಸೋಂಕು ದೃಢ

    ಗುಳೇದಗುಡ್ಡ: ಪಟ್ಟಣದಲ್ಲಿ ಗುರುವಾರ ಒಂದೇ ದಿನ 31 ಕರೊನಾ ಪ್ರಕರಣಗಳು ವರದಿಯಾಗಿವೆ ಎಂದು ತಹಸೀಲ್ದಾರ್ ಜಿ.ಎಂ. ಕುಲಕರ್ಣಿತಿಳಿಸಿದರು.

    ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಾವನ್ನಪ್ಪಿದ್ದ ಗುಡದಾರಿ ಓಣಿಯ 70 ವರ್ಷದ ವೃದ್ಧೆಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ 55 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ 23 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಇತ್ತೀಚೆಗೆ ಪಟ್ಟಣದಲ್ಲಿ ರದ್ದಾದ ಮದುವೆಯಲ್ಲಿ ಭಾಗಿಯಾಗಿದ್ದ 36 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.

    ಸೀಲ್‌ಡೌನ್: ಪಟ್ಟಣದ ಹುಂಡೇಕಾರ ಓಣಿಯಲ್ಲಿ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಪುರಸಭೆ ವತಿಯಿಂದ ಹುಂಡೇಕಾರ ಓಣಿಯನ್ನು ಗುರುವಾರ ಬ್ಯಾರಿಕೇಡ್ ಹಾಕಿ, ಸೀಲ್‌ಡೌನ್ ಮಾಡಲಾಯಿತು.

    ಲಕ್ಷ್ಮೀ ಬ್ಯಾಂಕ್ ಪ್ರಧಾನ ಕಚೇರಿ ಸಿಬ್ಬಂದಿಯೊಬ್ಬರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಲಕ್ಷ್ಮೀ ಸಹಕಾರಿ ಬ್ಯಾಂಕ್‌ನ್ನು ಎರಡು ದಿನದ ಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ತಿಳಿಸಿದರು. ಸಿಪಿಐ ರಮೇಶ ಹನಾಪುರ, ಪಿಎಸ್‌ಐ ನೂರಜಾನ್‌ಸಾಬರ, ಪುರಸಭೆ ಮ್ಯಾನೇಜರ್ ರಮೇಶ ಪದಕಿ ಮತ್ತಿತರರು ಇದ್ದರು.

    ಸ್ವಯಂ ಕ್ವಾರಂಟೈನ್‌ಗೆ ವಿನಂತಿ
    ವೃದ್ಧೆಯ ಶವಸಂಸ್ಕಾರದಲ್ಲಿ ಪಾಲ್ಗೊಂಡವರು ತಾವೇ ಸ್ವಯಂ ಕ್ವಾರೆಂಟೈನ್ ಆಗಬೇಕು ಎಂದು ಮಾಧ್ಯಮದ ಮುಖಾಂತರ ವೈದ್ಯರಾದ ಡಾ.ಕೆ.ಟಿ.ಗಾಜಿ ವಿನಂತಿಸಿಕೊಂಡರು.

    ಸೋಂಕು ದೃಢ ಪಟ್ಟವರನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ಹಾಗೂ ಶಂಕಿತರನ್ನು ಚಿಕ್ಕಮುಚ್ಚಳಗುಡ್ಡ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿಯೂ ಸಂಖ್ಯೆ ಹೆಚ್ಚಾದರೆ ಅವರನ್ನು ಗುಳೇದಗುಡ್ಡದಲ್ಲಿಯೇ 50 ಹಾಸಿಗೆಯ ಆರೈಕೆ ಕೇಂದ್ರದ ಸಿದ್ಧವಾಗಿದ್ದು, ಅಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ವೈದ್ಯ ಡಾ.ಕೆ.ಟಿ ಗಾಜಿ ತಿಳಿಸಿದ್ದಾರೆ.

    ನಮಗೆ ಶವಸಂಸ್ಕಾರದಲ್ಲಿ ಭಾಗಿಯಾದವರ ಪಟ್ಟಿ ಲಭಿಸಿದೆ. ಆ ಪ್ರಕಾರ ಅವರನ್ನು ಕ್ವಾರೆಂಟೈನ್ ಮಾಡಲು ಸಿದ್ಧತೆ ನಡೆಸಿದ್ದೇವೆ. ಅವರೂ ಕ್ವಾರೆಂಟೈನ್ ಆಗಲಿದ್ದಾರೆ. ಇನ್ನುಳಿದ ಭಾಗವಹಿಸಿದವರೂ ಸ್ವತಃ ಅವರೇ ಬಂದರೆ ಒಳಿತು. ಇಲ್ಲದಿದ್ದರೆ ನಾವೇ ಅಂಥವರನ್ನು ಪತ್ತೆ ಮಾಡಿ ಕರೆತರುತ್ತೇವೆ.
    ಜಿ.ಎಂ.ಕುಲಕರ್ಣಿ ತಹಸೀಲ್ದಾರ್





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts