More

    ಗುಜರಾತ್​ ಗಲಭೆ ಪ್ರಕರಣ, ನರೇಂದ್ರ ಮೋದಿ ದೋಷಮುಕ್ತ: ಎಸ್​ಐಟಿ ವರದಿ ಎತ್ತಿಹಿಡಿದ ಸುಪ್ರೀಂ ಕೋರ್ಟ್​

    ನವದೆಹಲಿ: ಗುಜರಾತ್​ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಅಂದಿನ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಹಾಗೂ ಸರ್ಕಾರದ 62 ಹಿರಿಯ ಅಧಿಕಾರಿಗಳು ದೋಷಮುಕ್ತರು ಎಂಬ ಎಸ್​ಐಟಿ ವರದಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

    2002ರ ಫೆ. 28ರಂದು ನಡೆದ ಗುಜರಾತ್ ಗಲಭೆ ಪ್ರಕರಣದಲ್ಲಿ ಸಾವಿಗೀಡಾಗಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿಯ ಪತ್ನಿ ಝಾಕಿಯಾ ಜಾಫ್ರಿ (83) ಅವರು, ಈ ಪ್ರಕರಣದ ಕುರಿತಂತೆ ಸಲ್ಲಿಕೆಯಾಗಿದ್ದ ವಿಶೇಷ ತನಿಖಾ ದಳದ ವರದಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ಗೋಧ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ಹಿಂದುಗಳಿಗೆ ಸೇಡು ತೀರಿಸಿಕೊಳ್ಳಲು ಅನುಕೂಲವಾಗುವಂತೆ ಗುಜರಾತ್​ನ ರಾಜಕಾರಣಿಗಳು ಹುನ್ನಾರ ನಡೆಸಿದ್ದರು ಎಂದು ಝಾಕಿಯಾ ಮನವಿ ಸಲ್ಲಿಸಿದ್ದರು. ಎಹ್ಸಾನ್ ಜಾಫ್ರಿ ಸಾವಿಗೂ ಹಿಂದಿನ ದಿನ ಸಬರಮತಿ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಸಂಘಟನೆಗೆ ಸೇರಿದ್ದ 59 ಮಂದಿಯನ್ನು ಬೆಂಕಿ ಹಾಕಿ ಸಾಯಿಸಲಾಗಿತ್ತು. ಆರೋಪಿಗಳು ಯಾರು ಎನ್ನುವ ಕುರಿತು ವಿವಾದವಿದ್ದರೂ ಈ ಘಟನೆ ಹಿಂದಿದ್ದದ್ದು ಮುಸ್ಲಿಮರ ಗುಂಪು ಎಂದು ಶಂಕಿಸಲಾಗಿತ್ತು. ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ಮರುದಿನ ಗಲಭೆ ಸಂಭವಿಸಿದ್ದು, ಇದರಲ್ಲಿ 1,180 ಮಂದಿ ಹತ್ಯೆಗೀಡಾಗಿದ್ದರು.

    ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ?

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts