More

    ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಆರೋಪ: ಐಪಿಎಸ್​ ಅಧಿಕಾರಿಯ ವರ್ಗಾವಣೆ

    ಅಮ್ರೇಲಿ: ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಆರೋಪದ ಮೇಲೆ ಐಪಿಎಸ್​ ಅಧಿಕಾರಿ ಅಭಯ್​ ಸೋನಿ ಅವರನ್ನು ಗುಜರಾತ್​ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ಅಭಯ್​ ಅವರನ್ನು ಅಮ್ರೇಲಿ ಜಿಲ್ಲೆಯಿಂದ ಗಾಂಧಿನಗರಕ್ಕೆ ವರ್ಗಾಯಿಸಿದೆ. ಶನಿವಾರ ರಾತ್ರಿ ಬಿಜೆಪಿ ಕಾರ್ಯಕರ್ತರ ಮೇಲೆ ಕೈ ಮಾಡಿದ್ದಕ್ಕೆ ಸೋನಿನ ಅವರನ್ನು ವರ್ಗಾಯಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಸೋನಿ ಅವರನ್ನು ಅಮ್ರೇಲಿ ಜಿಲ್ಲೆಯ ಸಹಾಯಕ ಪೊಲೀಸ್​ ಆಯುಕ್ತರಾಗಿದ್ದರು.

    ಗುಜರಾತ್​ ರಾಜ್ಯ ಗೃಹ ಇಲಾಖೆ ಸೋನಿ ಅವರಿಗೆ ವರ್ಗಾವಣೆ ಆದೇಶ ಪ್ರತಿಯನ್ನು ನೀಡಿದ್ದು, ಅಮ್ರೇಲಿಯಿಂದ ಗಾಂಧಿನಗರದ ಎಸ್​ಆರ್​ಪಿಯ ಬೆಟಾಲಿಯನ್​ ಕ್ವಾರ್ಟರ್​ ಮಾಸ್ಟರ್​ ಆಗಿ ನೇಮಕ ಮಾಡಿದ್ದಾರೆ.

    ಇದನ್ನೂ ಓದಿರಿ: ಪಬ್‌ಜಿ ಸೋಲಿನ ಸೇಡು, ಸ್ನೇಹಿತನಿಂದಲೇ ಕೊಲೆ, ರಾತ್ರಿ ಹೋದ ಬಾಲಕ ಬೆಳಗ್ಗೆ ಶವವಾಗಿ ಪತ್ತೆ

    ವರ್ಗಾವಣೆ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ, ಅಮ್ರೇಲಿಯಲ್ಲಿ ಲಸಿಕಾ ಶಿಬಿರ ಅಳವಡಿಸಲು ಪಕ್ಷದ ಕಾರ್ಯಕರ್ತರು ತಯಾರಿ ನಡೆಸುತ್ತಿದ್ದರು. ಶನಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ಸೋನಿ, ಕೆಲ ನಾಯಕರು ಮತ್ತು ಕಾರ್ಯಕರ್ತರನ್ನು ಥಳಿಸಿದರು. ಭಾನುವಾರ ಲಸಿಕಾ ಶಿಬಿರ ನಡೆಯಬೇಕಿತ್ತು. ಘಟನೆ ನಡೆದ ಬಳಿಕ ಇಬ್ಬರು ಆಸ್ಪತ್ರೆಗೆ ದಾಖಲಾದರು ಎಂದಿದ್ದಾರೆ.

    ಇದಾದ ಬಳಿಕ ಸೋನಿ ವರ್ಗಾವಣೆಗೆ ರಾಜ್ಯ ಸರ್ಕಾರದ ಬಳಿ ಮನವಿ ಮಾಡಿಕೊಂಡೆವು. ಹೀಗಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎಂದಿದ್ದಾರೆ. ವರ್ಗಾವಣೆ ಬಗ್ಗೆ ಸೋನಿ ಮತ್ತು ಪೊಲೀಸ್​ ಇಲಾಖೆ ಈವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. (ಏಜೆನ್ಸೀಸ್​)

    ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳು: ಹೀಗೆ ಮುಂದುವರಿದ್ರೆ ಮತ್ತೆ ಲಾಕ್​ಡೌನ್ ಸಾಧ್ಯತೆ?​

    ಕ್ಲಾಸ್​ಮೇಟ್​ ಫೋನ್​ ನಂಬರ್​ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆನ್​ಲೈನ್​ ಕ್ಲಾಸ್​ ಹೆಸರಲ್ಲಿ ಮಾಡಿದ್ದು ನೀಚ ಕೃತ್ಯ!

    ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ​! ವೈದ್ಯರ ಮುಂದೆ 6 ತಿಂಗಳ ಹಿಂದಿನ ನಿಜ ಸಂಗತಿ ಬಿಚ್ಚಿಟ್ಟ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts