More

    ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳು: ಹೀಗೆ ಮುಂದುವರಿದ್ರೆ ಮತ್ತೆ ಲಾಕ್​ಡೌನ್ ಸಾಧ್ಯತೆ?​

    ನವದೆಹಲಿ: ಮಹಾಮಾರಿ ಕರೊನಾ ಎರಡನೇ ಅಲೆ ಶುರುವಾದಾಗಿನಿಂದ ದೇಶದಲ್ಲಿ ದಿನೇದಿನೆ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

    ಇಳಿಮುಖವಾಗುತ್ತಿದ್ದ ಕರೊನಾ ಪ್ರಕರಣಗಳು ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಏರುಗತಿಯಲ್ಲಿ ಸಾಗುತ್ತಿದ್ದು, ಮೊದಲ ಬಾರಿಗೆ ಮತ್ತೆ 1 ಲಕ್ಷ ಗಡಿ ದಾಟಿದೆ. ಸರ್ಕಾರದ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ ಒಟ್ಟು 1,03,558 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮೂಲಕ ದೇಶದ ಒಟ್ಟಾರೆ ಕೋವಿಡ್​ ಪ್ರಕರಣಗಳ ಸಂಖ್ಯೆ 1,25,89,067ಕ್ಕೆ ಏರಿಕೆಯಾಗಿದೆ.

    ಇದನ್ನೂ ಓದಿರಿ: Web Exclusive | ಪ್ರತಿಧ್ವನಿಸಿದ ಬಂಡೀಪುರ ರಾತ್ರಿ ಸಂಚಾರ ನಿಷೇಧ; ತಮಿಳುನಾಡು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಕೆ..

    ಮಹಾರಾಷ್ಟ್ರ ಅತ್ಯಂತ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ. ಒಟ್ಟು 29 ಲಕ್ಷ ಪ್ರಕರಣಗಳು ಇದುವರೆಗೂ ವರೆಯಾಗಿವೆ. ಭಾನುವಾರ ಸರ್ಕಾರ ಡೇಟಾ ಪ್ರಕಾರ ಹೊಸದಾಗಿ 57,074 ಕೇಸ್​ಗಳು ವರದಿಯಾಗಿವೆ. ಅದರಲ್ಲೂ ಮುಂಬೈ ಒಂದರಲ್ಲೇ 11,163 ಪ್ರಕರಣಗಳು ಪಾಸಿಟಿವ್​ ಆಗಿವೆ. ಈ ಮೂಲಕ ಮುಂಬೈ ಒಂದರಲ್ಲೇ ಈವರೆಗೂ 4,52,445 ಪ್ರಕರಣಗಳು ಬೆಳಕಿಗೆ ಬಂದಿವೆ.

    ಸದ್ಯ ದೇಶದಲ್ಲಿ 7,41,830 ಸಕ್ರೀಯ ಪ್ರಕರಣಗಳಿವೆ. 24 ಗಂಟೆಗಳಲ್ಲಿ 52,847 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, ಈವರೆಗೂ ಒಟ್ಟು 1,16,82,136 ಮಂದಿ ಗುಣಮುಖರಾಗಿದ್ದಾರೆ. 478 ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 1,65,101ಕ್ಕೆ ಏರಿಕೆಯಾಗಿದೆ. ಇದುವರೆಗೂ 7,91,05,163 ಮಂದಿಗೆ ಕರೊನಾ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್​)

    ಮೊದಲ ಡೋಸ್​ ಕರೊನಾ ಲಸಿಕೆ ಪಡೆದು ಸಿಎಂ ಯೋಗಿ ಆದಿತ್ಯನಾಥ್​​ ಹೇಳಿದ್ದು ಹೀಗೆ…

    ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ​! ವೈದ್ಯರ ಮುಂದೆ 6 ತಿಂಗಳ ಹಿಂದಿನ ನಿಜ ಸಂಗತಿ ಬಿಚ್ಚಿಟ್ಟ ಮಹಿಳೆ

    ಕ್ಲಾಸ್​ಮೇಟ್​ ಫೋನ್​ ನಂಬರ್​ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆನ್​ಲೈನ್​ ಕ್ಲಾಸ್​ ಹೆಸರಲ್ಲಿ ಮಾಡಿದ್ದು ನೀಚ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts