More

    ಧರ್ಮಾಧಾರದಲ್ಲಿ ಸೋಂಕಿತರ ವಿಭಜಿಸಿಲ್ಲ; ಗುಜರಾತ್​​ ಸರ್ಕಾರ ಸ್ಪಷ್ಟನೆ

    ಗಾಂಧಿನಗರ: ಅಹಮದಾಬಾದ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​-19 ಪೀಡಿತರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕ ವಾರ್ಡ್​ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವರದಿಗಳನ್ನು ಗುಜರಾತ್​​ ಸರ್ಕಾರ ತಳ್ಳಿ ಹಾಕಿದೆ.
    ರೋಗಿಗಳನ್ನು ಅವರ ವೈದ್ಯಕೀಯ ಸ್ಥಿತಿ, ಕಾಯಿಲೆಯ ಗಂಭೀರತೆ, ವಯಸ್ಸು ಹಾಗೂ ಗುಣಲಕ್ಷಣಗಳ ಬಗ್ಗೆ ವೈದ್ಯರು ನೀಡುವ ವರದಿಗೆ ಅನುಗುಣವಾಗಿ ಪ್ರತ್ಯೇಕ ವಾರ್ಡ್​ಗಳಲ್ಲಿ ಇರಿಸಲಾಗುತ್ತದೆ. ಧರ್ಮದ ಆಧಾರದಲ್ಲಿ ರೋಗಿಗಳನ್ನು ಬೇರೆ ಬೇರೆ ವಾರ್ಡ್​ಗಳಲ್ಲಿ ಇಡಲಾಗಿದೆ ಎಂಬ ವರದಿಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದು ಗುಜರಾತ್​ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವಿಟರ್​ ಮೂಲಕ ಸ್ಪಷ್ಟಪಡಿಸಿದೆ.

    ಅಹಮದಾಬಾದ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 186 ಜನರು ದಾಖಲಾಗಿದ್ದು, ಈ ಪೈಕಿ 150 ಸೋಂಕಿತರಾಗಿದ್ದಾರೆ. ಇವರಲ್ಲಿ ಒಂದು ಕೋಮಿಗೆ ಸೇರಿದ 40 ಜನರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಸರ್ಕಾರದ ಆದೇಶದ ಮೇರೆಗೆ ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಗುಣವಂತ ಎಚ್​. ರಾಠೋಡ್​ ಹೇಳಿದ್ದಾಗಿ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿತ್ತು. ಜತೆಗೆ, ರೋಗಿಗಳು ಇದನ್ನೇ ಹೇಳಿದ್ದಾರೆಂದು ತಿಳಿಸಿತ್ತು.

    ಈ ನಡುವೆ, ಗುಜರಾತ್​ನಲ್ಲಿ ಬುಧವಾರ ಮತ್ತೆ 42 ಹೊಸ ಸೋಂಕು ಪ್ರಕರರಣಗಳು ವರದಿಯಾಗುವ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 695ಕ್ಕೆ ತಲುಪಿದಂತಾಗಿದೆ. ಅದರಲ್ಲೂ ಅಹಮದಾಬಾದ್​ವೊಂದರಲ್ಲಿಯೇ 404 ಜನರು ಸೋಂಕಿಗೆ ಒಳಗಾಗಿದ್ದಾರೆ. ವಡೋದರಾದಲ್ಲಿ 116 ಜನರು ಪಾಸಿಟಿವ್​ ಆಗಿದ್ದಾರೆ.

    ಅಹಮದಾಬಾದ್​ ಆಸ್ಪತ್ರೆಯಲ್ಲಿ ಧರ್ಮ ಆಧರಿಸಿ ಪ್ರತ್ಯೇಕ ವಾರ್ಡ್​ನಲ್ಲಿ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts