More

    ಬಸ್​ ನಿಲ್ದಾಣದಲ್ಲಿ ಕರೊನಾ ಸೋಂಕಿತನ ಮೃತದೇಹ ಕಂಡು ಕಂಗಾಲಾದ ಜನ: ತನಿಖೆಗೆ ಆದೇಶ

    ಅಹಮದಾಬಾದ್​ (ಗುಜರಾತ್​): ಕರೊನಾ ಸೋಂಕಿತರೊಬ್ಬರು ಮೃತದೇಹವು ಅಹಮದಾಬಾದ್​ನ ದಾನಿಲಿಮ್ದಾ ಏರಿಯಾದ ಬಸ್​​ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲಾ ಕಾರಣ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರು ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.

    ಮೃತದೇಹ ಬಸ್​ ನಿಲ್ದಾಣದಲ್ಲಿ ಕಂಡುಬಂದಿದ್ದು ಹೇಗೆ ಎಂಬುದರ ತನಿಖೆಗೆ ಗುಜರಾತ್​ ಸರ್ಕಾರ ಆದೇಶಿಸಿದ್ದು, ಸಿಎಂ ವಿಜಯ್​ ರೂಪಾಣಿ ಅವರು ಮಾಜಿ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಜೆ.ಪಿ. ಗುಪ್ತಾ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದು, 24 ಗಂಟೆಯೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

    ಇದನ್ನೂ ಓದಿ: ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್​ ಮಾಡಿದ ಕಾಮುಕರು

    ಛಾಗನ್​ ಮಕ್ವಾನ (67) ಎಂಬಾತ ಅಹಮದಾಬದ್​ ಜಿಲ್ಲೆಯ ಕೋವಿಡ್​-19 ಆಸ್ಪತ್ರೆಗೆ ಕರೊನಾ ಪಾಸಿಟಿವ್​ ಹಿನ್ನೆಲೆಯಲ್ಲಿ ಮೇ 13ರಂದು ದಾಖಲಾಗಿದ್ದರು. ಅವರ ಕುಟುಂಬವನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.

    ಇದೀಗ ಮಕ್ವಾನ ಅವರ ಮೃತದೇಹ ಬಿಆರ್​ಟಿಎಸ್​ ಬಸ್​ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿ ಮೃತದೇಹ ಕಂಡು ಪೊಲೀಸರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮೃತದೇಹವನ್ನು ಪರೀಕ್ಷೆಗಾಗಿ ಪೊಲೀಸರು ಬೇರೋಂದು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮೃತನ ಪ್ಯಾಕೆಟ್​ನಲ್ಲಿದ್ದ ನಂಬರ್​ ಮೂಲಕ ಕುಟುಂಬದವರನ್ನು ಸಂಪರ್ಕಿಸಿದರು. ಆ ಬಳಿಕವೇ ಶವಪರೀಕ್ಷೆ ನಡೆಸಲಾಯಿತು ಎಂದು ಮಕ್ವಾನಾ ಸಹೋದರ ಗೋವಿಂದ ಅವರು ತಿಳಿಸಿದ್ದಾರೆ.

    ಮಕ್ವಾನ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಆಸ್ಪತ್ರೆ ಸಿಬ್ಬಂದಿ ವಿಫಲವಾದರು. ಪೊಲೀಸರು ಕೂಡ ವಿಚಾರಣೆ ನಡೆಸಲಿಲ್ಲ. ಎಸ್​ಐಟಿ ತನಿಖೆಗೆ ನೀಡಲು ಪತ್ರ ಬರೆದಿದ್ದೇವೆ ಎಂದು ಬಿಜೆಪಿ ಶಾಸಕ ಗಿರೀಶ್​ ಪಾರ್ಮರ್​ ಸಹ ಆರೋಪಿಸಿದ್ದಾರೆ.

    ಇದನ್ನೂ ಓದಿ: ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

    ಮಕ್ವಾನ್​ ಅವರನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇಡುವುದು ಸೂಕ್ತ ಎನಿಸಿತು. ಆತನಿಗೆ ಎಲ್ಲವನ್ನು ತಿಳಿಸಿ ಮನೆಗೆ ಹೋಗಲು ಹೇಳಿದ್ದೆವು. ಆದರೆ, ಆತನ ಜೀವನ ಹೇಗೆ ಕೊನೆಯಾಯಿತು ಎಂದು ನಮಗೆ ತಿಳಿದಿಲ್ಲ ಎಂದು ವೈದ್ಯರೊಬ್ಬ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಕರೊನಾ ವಿಚಾರದಲ್ಲಿ ಅಧಿಕಾರಿಗಳಿಬ್ಬರ ಟಾಕ್​ ಫೈಟ್​​ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts