More

    ಕಾಂಗ್ರೆಸ್‌ ಶಾಸಕನಿಗೆ ಕರೊನಾ ಸೋಂಕು; ಅವರನ್ನು ಸಂಪರ್ಕಿಸಿದವರಿಗೆಲ್ಲ ಆತಂಕ…ಸಿಎಂಗೂ ಶುರುವಾಗಿದೆ ಭಯ..!

    ಅಹಮದಾಬಾದ್: ಇಲ್ಲಿಯ ಜಮಲಪುರ್‌-ಖಾಡಿಯಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಇಮ್ರಾನ್‌ ಖೇಡವಾಲಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಸಂಪರ್ಕಿಸಿರುವ ಹಲವು ಮುಖಂಡರಲ್ಲಿ ಭೀತಿ ಶುರುವಾಗಿದೆ.

    ರಾಜ್ಯದಲ್ಲಿ ಕರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಮಂಗಳವಾರ ಬೆಳಗ್ಗೆ ಸಭೆ ಕರೆದಿದ್ದರು. ಈ ಸಭೆಯಲ್ಲಿ ವಿಜಯ್‌ ರೂಪಾನಿ ಅವರು ಮಾತ್ರವಲ್ಲದೇ, ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌, ಗೃಹ ಸಚಿವ ಪ್ರದೀಪ್‌ ಸಿಂಗ್‌ ಜಡೇಜಾ ಸೇರಿದಂತೆ ಎಲ್ಲಾ ಪಕ್ಷಗಳ ಅನೇಕ ಶಾಸಕರು ಹಾಜರಿದ್ದರು.

    ಈ ಸಭೆಗೆ ಶಾಸಕ ಇಮ್ರಾನ್‌ ಕೂಡ ಹಾಜರಾಗಿದ್ದರು. ಸಭೆಯಿಂದ ಹೋದ ನಂತರ ಕೆಲವೇ ಗಂಟೆಗಳಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರಿಗೆ ಮೊದಲೇ ಸೋಂಕಿನ ಲಕ್ಷಣಗಳು ಗೋಚರಿಸಿತ್ತೇ ಇಲ್ಲವೇ ಎಂಬ ಬಗ್ಗೆ ತಿಳಿದುಬಂದಿಲ್ಲ.

    ಈ ಘಟನೆಯ ನಂತರ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ಇತರರನ್ನೂ ಕ್ವಾರಂಟೈನ್‌ಗೆ ಒಳಪಡಿಸುವ ಅಗತ್ಯವಿದೆ ಎನ್ನಲಾಗಿದೆ.

    ಗುಜರಾಜ್‌ನಲ್ಲಿ ಇದುವರೆಗೆ 650 ಸೋಂಕು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ 28 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಹಮದಾಬಾದ್‌ನಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು ಇವೆ. (ಏಜನ್ಸೀಸ್‌)

    ಕಾಂಗ್ರೆಸ್‌ ಶಾಸಕನಿಗೆ ಕರೊನಾ ಸೋಂಕು; ಅವರನ್ನು ಸಂಪರ್ಕಿಸಿದವರಿಗೆಲ್ಲ ಆತಂಕ...ಸಿಎಂಗೂ ಶುರುವಾಗಿದೆ ಭಯ..!

    ಕರೊನಾದಂಥ ಕಷ್ಟ ಕಾಲದಲ್ಲೂ ಲಿವರ್ ಕಸಿಗೆ ಒಳಗಾದ ಬಾಲಕಿಗೆ ಔಷಧ ಪೂರೈಕೆ: ನೆರವು ಬಂದಿದ್ದು ಎಲ್ಲಿಂದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts