More

    ಕೆಲಸ ಕೊಡಿಸುವುದಾಗಿ ನಂಬಿಸಿ ಗ್ಯಾಂಗ್ ರೇಪ್… ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    ಅಹಮದಾಬಾದ್: ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದಿನ ಸೌತ್ ಬೋಪಲ್ ನಿವಾಸಿಯಾದ ಜೈಮಿನ್ ಪಟೇಲ್ ಎಂಬ ಆರೋಪಿ ಅಮ್ರೇಲಿಯ ಮೋಟಾ ಭಾಂಡರೀಯಾ ಗ್ರಾಮದಲ್ಲಿ ಬಚ್ಚಿಟ್ಟುಕೊಂಡಿದ್ದ ಎನ್ನಲಾಗಿದೆ.

    ರಾಜಕೋಟದ 23 ವರ್ಷದ ಯುವತಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಈಗಾಗಲೇ ಇತರ ನಾಲ್ಕು ಆರೋಪಿಗಳಾದ ಪ್ರಗ್ಯೇಶ್ ಪಟೇಲ್, ಜಿತೇಂದ್ರಪುರಿ ಗೋಸ್ವಾಮಿ, ಮಾಲ್ದೇವ್ ಭರ್ವಾಡ್ ಮತ್ತು ನೀಲಂ ಪಟೇಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಜೈಮಿನ್ ಪಟೇಲ್ ಮಾತ್ರ ಮೂರು ತಿಂಗಳಿಂದ ತಲೆ ಮರಸಿಕೊಂಡಿದ್ದ.

    ಇದನ್ನೂ ಓದಿ: ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ಆರೋಪಿಗಳು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹೊಟೆಲ್ಲಿಗೆ ಕರೆದು, ಅಲ್ಲಿ ಮತ್ತು ಬರಿಸುವ ಔಷಧಿ ನೀಡಿ ಬಲಾತ್ಕಾರ ಮಾಡಿದ್ದರು ಎನ್ನಲಾಗಿದೆ. ಅವಳ ಫೋಟೋ ಮತ್ತು ವೀಡಿಯೋ ತೆಗೆದು ಅವಳನ್ನು ಬ್ಲಾಕ್​ಮೇಲ್ ಮಾಡುತ್ತಾ, ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ ಬೇರೆ ಬೇರೆ ಹೊಟೆಲ್​ಗಳಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ.

    ಈ ಬಗ್ಗೆ ನವೆಂಬರ್ 3, 2020 ರಂದು ಯುವತಿ ಸಲ್ಲಿಸಿದ ದೂರಿನ ಮೇಲೆ ಅಹಮದಾಬಾದ್ ಪೊಲೀಸರು, ಬಲಾತ್ಕಾರದ ಜೊತೆ ಅಪಹರಣ ಮತ್ತು ಅಪರಾಧಿಕ ಸಂಚು ನಡೆಸಿರುವ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ರೈತ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ದಂಡ ಕಟ್ಟಬೇಕು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts