More

    ಮಕ್ಕಳು ಮಾಸ್ಕ್​ ಧರಿಸಿಯೇ ಶಾಲೆಗೆ ಬರಬೇಕು, ಹಿರಿಯ ಶಿಕ್ಷಕರು ಮುಖ ಮುಚ್ಕೊಂಡು ಪಾಠ ಮಾಡಬೇಕು; ಶಾಲೆ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಪ್ರಾಥಮಿಕ ಶಾಲೆಗಳನ್ನು ಅ.25ರಿಂದ ಶಿಕ್ಷಣ ಇಲಾಖೆ ಆರಂಭಿಸುತ್ತಿದ್ದು, ಈ ವೇಳೆ ಆನುಸರಿಸಬೇಕಾದ ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.
    ಆ ಪ್ರಕಾರವಾಗಿ ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಬೋಧನೆ ಮಾಡಬೇಕಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಫೇಸ್ ಶೀಲ್ಡ್ ಧರಿಸಿ ತರಗತಿಗೆ ಹಾಜರಾಗುವಂತೆ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಸೂಚನೆ ನೀಡಿದೆ.

    ಈ ಹಿಂದೆಯೇ 1ರಿಂದ 5ನೇ ತರಗತಿ ಶಾಲೆ ಆರಂಭಿಸುವುದರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ರೂಪಿಸಿ ಗುರುವಾರ ಬಿಡುಗಡೆ ಮಾಡಿದೆ.

    ಮೊದಲಿಗೆ ಅ.25ರಿಂದ 30ರವರೆಗೆ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಅರ್ಧ ದಿನ ಮಾತ್ರ ಭೌತಿಕ ತರಗತಿಗಳನ್ನು ನಡೆಸಬೇಕಿದೆ. ನ.2ರಂದು ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಬೇಕಿದೆ. ವಿಶೇಷ ಎಂದರೆ, 1ರಿಂದ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವೇನಲ್ಲ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕರಿಗೆ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕಿದೆ.

    ಇದನ್ನೂ ಓದಿ: ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಉಳಿದಂತೆ ಶಾಲೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಅಲ್ಲದೆ, 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ‘ಫೇಸ್ ಶೀಲ್ಡ್’ ಧರಿಸುವುದು ಕಡ್ಡಾಯ ಎಂದು ಸೂಚಿಸಿದೆ.

    ಬಿಸಿಯೂಟ ಇಲ್ಲ: 1ರಿಂದ 5ನೇ ತರಗತಿ ಅ.30ರವರೆಗೆ ಅರ್ಧ ದಿನ ಮಾತ್ರ ಶಾಲೆಗಳು ನಡೆಯುವುದರಿಂದ ಈ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ನ.2ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವುದರಿಂದ ಆ ವೇಳೆಗೆ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ. ಅವಶ್ಯಕತೆ ಅನುಸಾರ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದೆ.

    ಇದನ್ನೂ ಓದಿ: ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​

    ಕಳೆದ ಒಂದೂವರೆ ವರ್ಷದಿಂದ ಭೌತಿಕವಾಗಿ ಶಾಲೆಗಳು ನಡೆಯದೇ ಇರುವುದರಿಂದ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಎಸ್‌ಇಆರ್‌ಟಿ ಕಡೆಯಿಂದ ಸೇತುಬಂಧ ಶಿಕ್ಷಣದಂತಹ ಬೋಧನಾ ಪದ್ಧತಿಯಿಂದ ಪ್ರಾರಂಭಿಸಿ ತರಗತಿ ಆರಂಭಿಸಬೇಕೆಂದು ಸೂಚಿಸಿದೆ. ಈ ಮಾರ್ಗಸೂಚಿ ಹೊರತಾಗಿ ಕೋವಿಡ್ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

    ಪ್ರಮುಖ ಸೂಚನೆಗಳು

    • ಗರಿಷ್ಠ 20 ಮಕ್ಕಳ ತಂಡ ರಚನೆ ಮಾಡಬೇಕು
    • ಕರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು
    • ರೋಗ ಲಕ್ಷಣ ಇದ್ದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿ, ಚಿಕಿತ್ಸೆಗೆ ಸೂಚಿಸಬೇಕು
    • ತರಗತಿಗಳನ್ನು ಸ್ಯಾನಿಟೈಸ್ ಮಾಡಬೇಕು
    • ಸದ್ಯಕ್ಕೆ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಅನುಮತಿ ಇಲ್ಲ

    1ರಿಂದ 5ನೇ ತರಗತಿ ವೇಳಾಪಟ್ಟಿ: ಅ.25ರಿಂದ 30ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ 1.30 ಹಾಗೂ ಶನಿವಾರದಂದು ಬೆಳಗ್ಗೆ 8ರಿಂದ 11.40ರವರೆಗೆ ನಡೆಸಬೇಕು. ನ.2ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10.30ರಿಂದ 4.30 ಹಾಗೂ ಶನಿವಾರದಂದು ಬೆಳಗ್ಗೆ 8ರಿಂದ 11.40ರವರೆಗೆ ನಡೆಸಬೇಕು.

    ದೇಶದ ಶೇ. 95 ಮಂದಿಗೆ ಪೆಟ್ರೋಲ್ ಅಗತ್ಯವೇ ಇಲ್ಲ!; ಹೀಗಂದಿದ್ದು ಯಾರು ಗೊತ್ತೇ?

    9 ವರ್ಷಗಳ ಬಳಿಕ ನಕ್ಸಲ್​ ನಂಟು ಆರೋಪದಿಂದ ಮುಕ್ತರಾದ್ರು ವಿಠಲ ಮಲೆಕುಡಿಯ ಮತ್ತು ತಂದೆ; ಆರೋಪಮುಕ್ತಗೊಳಿಸಿದ ನ್ಯಾಯಾಲಯ

    600 ಮೆಟ್ಟಿಲು ಹತ್ತಿ ದೇವಿಯ ಹರಕೆ ತೀರಿಸಿದ ಭಕ್ತ, ಕೆಲವೇ ನಿಮಿಷಗಳಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts