More

    ಸದನದಲ್ಲಿ ತನ್ನದೇ ಸರ್ಕಾರದ ವಿರುದ್ಧ ಧರಣಿಗೆ ಕುಳಿತ ಬಿಜೆಪಿ ಎಂಎಲ್ಸಿ!

    ಬೆಂಗಳೂರು: ಕರೊನಾ ಆತಂಕದ ನಡುವೆಯೂ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಹೊರಗೆ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆಯ ಕಿಚ್ಚು ಸ್ಫೋಟಗೊಂಡಿದೆ. ಸದನದೊಳಗೆ ವಿಪಕ್ಷಗಳು ಚಾಟಿ ಬೀಸುತ್ತಿವೆ. ಈ ನಡುವೆ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಪ್ರತಿಭಟನೆ ನಡಸುವ ಮೂಲಕ ಸರ್ಕಾರಕ್ಕೆ ಇರಿಸುಮುರಿಸು ಆಗುವಂತೆ ಮಾಡಿದ್ದಾರೆ.

    ಕರೊನಾ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರ ಬಾಕಿ ಗೌರವ ಧನ ತಕ್ಷಣ ಬಿಡುಗಡೆ ಮಾಡದಿದ್ದರೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧವೇ ಧ್ವನಿ ಎತ್ತುವುದಾಗಿ ಎಂಎಲ್‌ಸಿ ಆಯನೂರು ಮಂಜುನಾಥ್​ ಸೆ.19ರಂದು ಎಚ್ಚರಿಸಿದ್ದರು. ಅದರಂತೆ ಅದಿವೇಶನದ ಎರಡನೇ ದಿನವಾದ ಮಂಗಳವಾರ ಈ ಬಗ್ಗೆ ಗಟ್ಟಿದ್ವನಿಯಲ್ಲೇ ಆಯನೂರು ಪ್ರಸ್ತಾಪಿಸಿದರು. ಇದನ್ನೂ ಓದಿರಿ ‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

    ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಾರ್ಚ್​​ನಿಂದ ಇಲ್ಲಿಯವರೆಗೂ ವೇತನ ನೀಡಿಲ್ಲ. ಅವರು ಉಪವಾಸದಿಂದ ಸಾಯುತ್ತಿದ್ದಾರೆ. ಅವರಿಗೆ ಕೂಡಲೇ ವೇತನ ಪಾವತಿಸಬೇಕು ಎಂದು ಆಯನೂರು ಮಂಜುನಾಥ್​ ಆಗ್ರಹಿಸಿದರು. ಇದಕ್ಕೆ ಉತ್ತರ ಒದಗಿಸಲು ಕಾಲಾವಕಾಶ ಕೊಡಿ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದಂತೆ ಗರಂ ಆದ ಆಯನೂರು, ಅತಿಥಿ ಉಪನ್ಯಾಸಕರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸದನದ ಬಾವಿಗಿಳಿದು ಧರಣಿಗೆ ಕುಳಿತುರು. ಇವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರೂ ಸಾಥ್​ ನೀಡಿದರು.

    ಮೊನ್ನೆಯೇ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಆಯನೂರು, ಮನುಷ್ಯತ್ವವನ್ನೇ ಮರೆತಿರುವ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪನ್ಯಾಸಕರ ಗೌರವಧನ ಬಿಡುಗಡೆಗೆ ತಾಂತ್ರಿಕ ಕಾರಣ ನೀಡುತ್ತಿದ್ದಾರೆ. ಸೃಜನಶೀಲತೆ ಕಳೆದುಕೊಂಡಿದ್ದು, ಹೃದಯಹೀನ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ!

    ‘ಇದು ಹೃದಯಹೀನ ಸರ್ಕಾರ…’ ಎಂದು ರಾಜ್ಯದ ವಿರುದ್ಧ ಕಿಡಿಕಾರಿದ ಬಿಜೆಪಿ ಎಂಎಲ್​ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts