More

    ಗ್ಯಾರಂಟಿ ಗುಂಗಿನಲ್ಲಿ ಅಭಿವೃದ್ಧಿ ಮರೆತ ಕಾಂಗ್ರೆಸ್

    ಚಿಕ್ಕೋಡಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕರಗಾಂವ ಏತ ನೀರಾವರಿ ಯೋಜನೆೆ ಮಂಜೂರು ಮಾಡಿ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಗುಂಗಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಉಮರಾಣಿ ಗ್ರಾಪಂ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಮತ್ತು ವಿವಿಧ ವಸತಿ ಯೋಜನೆಯಡಿ ಮಂಜೂರಾದ ಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಕರಗಾಂವ ಏತ ನೀರಾವರಿ ಯೋಜನೆ ಮಂಜೂರಾತಿ ಕುರಿತು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಲಾಗಿದೆ. ಅವರ ಮೇಲೆ ಒತ್ತಡ ತಂದಾದರೂ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ನಾಗರಮುನ್ನೋಳಿ ಹೋಬಳಿ ಗ್ರಾಮಗಳ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದರು.

    ಬಸವ ವಸತಿ ಸೇರಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಉಮರಾಣಿ ಗ್ರಾಮಕ್ಕೆ 100 ಮನೆ ಮಂಜೂರು ಮಾಡಿಸಲಾಗಿದ್ದು, ಲಾನುಭವಿಗಳು ಸ್ವಲ್ಪ ಹಣ ಹಾಕುವ ಮುಖಾಂತರ ಗುಣಮಟ್ಟದ ಮನೆ ಕಟ್ಟಿಸಿಕೊಳ್ಳಬೇಕು. ಅದರೊಂದಿಗೆ ಶೌಚಗೃಹ ಕಟ್ಟಿಸಿಕೊಳ್ಳಬೇಕು. ಅದಕ್ಕೂ ಗ್ರಾಪಂನಿಂದ ಅನುದಾನ ಕೊಡಲಾಗುತ್ತದೆ ಎಂದರು.

    ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಪೂಜೇರಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ತಾಯವ್ವ ಬುರುಡ, ಮಾಜಿ ಅಧ್ಯಕ್ಷ ಮುರುಗೆಪ್ಪ ಅಡಿಸೇರಿ, ಬಸಗೌಡ ಪಾಟೀಲ, ಸದಾಶಿವ ಘೋರ್ಪಡೆ, ಸದಸ್ಯರಾದ ರಾಜು ಜಿಡ್ಡಿಮನಿ, ವಿವೇಕಾನಂದ ಸಂಭಾಜಿ, ಸಂತೋಷ ಪಾಟೀಲ, ಭಾರತಿ ಪಾಟೀಲ, ಲಕ್ಷ್ಮೀ ಸನದಿ, ನಿರ್ಮಲಾ ಪೂಜೇರಿ, ಆರತಿ ಕಾಂಬಳೆ, ಸುಭಾಷ ನೇಜ, ರಾವನ ಟೊನಪೆ, ಈರಪ್ಪ ಅರಬ್ಯಾನವಾಡಿ, ಮಾಯಪ್ಪ ಮಗದುಮ್ಮ, ಧನಪಾಲ ಭೀಮನಾಯಿಕ, ಕರೆಪ್ಪ ಇಟ್ನಾಳೆ, ಮುತ್ತು ಗುದಗಿ, ಪಿಡಿಒ ಸಂಜಯ ಚನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts