More

    ಜಿಟಿಟಿಸಿ ನನ್ನ ಕನಸಿನ ಯೋಜನೆ

    ಬೆಳಗಾವಿ/ಗೋಕಾಕ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನನ್ನ ಕನಸಿನ ಯೋಜನೆಗಳಲ್ಲೊಂದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

    ಗೋಕಾಕ ತಾಲೂಕಿನ ಅರಬಾವಿಯಲ್ಲಿ ನಿರ್ಮಾಣಗೊಂಡಿರುವ ಜಿಟಿಟಿಸಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಕೈಗಾರಿಕಾ ಮಂತ್ರಿಯಾಗಿದ್ದ ವೇಳೆ ಸುಮಾರು 20 ಕೋಟಿ ರೂ. ಅನುದಾನ ಕಲ್ಪಿಸಿ, ಈ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಂಡಿದ್ದೆ ಎಂದರು.

    ಕೊಪ್ಪಳ, ಉಡುಪಿ ಸೇರಿ ರಾಜ್ಯದಲ್ಲಿ ಒಟ್ಟು 4 ಜಿಲ್ಲೆಗಳಲ್ಲಿ ಜಿಟಿಟಿಸಿ ಕೇಂದ್ರ ತೆರೆಯಲು ನನ್ನ ಅವಧಿಯಲ್ಲಿ ಅನುಮತಿ ನೀಡಲಾಗಿತ್ತು. ಅರಬಾವಿಯಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಹೈಕೆಟ್ ಕೇಂದ್ರ ಸಜ್ಜಾಗಿದೆ. ಇಲ್ಲಿ ವಸತಿ, ವರ್ಕ್ ಶಾಪ್, ಮಷಿನರಿ, ಕ್ಯಾಂಟೀನ್ ಸೇರಿ ಮೂಲಸೌಕರ್ಯ ಒಳಗೊಂಡಿದೆ. ಈ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಮುಂಬೈ ಮತ್ತಿತರ ಕಡೆ ಹೋಗುವುದು ತಪ್ಪಲಿದೆ. ಮುಂದಿನ ತಿಂಗಳಿನಿಂದ ತರಬೇತಿ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಸದ್ಯ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು.

    ಶಂಕರ ಬೆಳಕುಂದಿ, ರಿಯಾಜ್ ಚೌಗಲಾ, ರಾಜು ಧರಗಶೆಟ್ಟಿ, ಜಿಟಿಟಿಸಿ ಕೇಂದ್ರ ಪ್ರಾಚಾರ್ಯ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts