More

    ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್​ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ

    ನವದೆಹಲಿ : ಇಂದು ನಡೆದ 44ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಕರೊನಾ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಬಳಸಲಾಗುವ ಹಲವು ವಸ್ತುಗಳ ಮೇಲಿನ ಜಿಎಸ್​ಟಿ ದರಗಳನ್ನು ಸೆಪ್ಟೆಂಬರ್ 30 ರವರೆಗೆ ಕಡಿತಗೊಳಿಸಲು ನಿರ್ಧರಿಸಲಾಗಿದೆ.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಹಣಕಾಸು ವ್ಯವಹಾರಗಳ ರಾಜ್ಯ ಸಚಿವ ಅನುರಾಗ್​ ಠಾಕುರ್​, ವಿವಿಧ ರಾಜ್ಯಗಳ ಹಣಕಾಸು ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ : ಜೂನ್​ 18 ರಂದು ಐಎಂಎ ಪ್ರತಿಭಟನೆ

    ಸೆಪ್ಟೆಂಬರ್​ 30 ರವರೆಗೆ ಪರಿಣಾಮಕಾರಿಯಾಗಿರುವಂತೆ, ಜಿಎಸ್​ಟಿ ಪ್ರಮಾಣವನ್ನು ಇಳಿಸಲು ಕೌನ್ಸಿಲ್ ಮಾಡಿರುವ ಶಿಫಾರಸ್ಸುಗಳು ಹೀಗಿವೆ –
    1) ಕೋವಿಡ್ ಮತ್ತು ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗಾಗಿ ಬಳಸುವ ಟಾಸಿಲಿಜುಮಾಬ್​ ಮತ್ತು ಆಂಫೋಟೆರಿಸಿನ್ ಬಿ ಔಷಧಿಗಳ ಮೇಲಿನ ಜಿಎಸ್​ಟಿಯನ್ನು ತೆಗೆದುಹಾಕಲಾಗಿದೆ. ಹಾಲಿ ಈ ಔಷಧಗಳ ಮೇಲೆ ಶೇ. 5 ರಷ್ಟು ಜಿಎಸ್​ಟಿ ಅನ್ವಯವಾಗುತ್ತಿತ್ತು.
    2) ಕೋವಿಡ್​ ಚಿಕಿತ್ಸೆಯಲ್ಲಿ ಬಳಸುವ ಇನ್ನಿತರ ಔಷಧಿಗಳಾದ ರೆಮ್​ಡೆಸಿವಿರ್​, ಹೆಪಾರಿನ್​ನಂತಹ ಕೋಆಗುಲೆಂಟ್​ಗಳು ಮತ್ತು ಆರೋಗ್ಯ ಸಚಿವಾಲಯ ಕೋವಿಡ್​ ಚಿಕಿತ್ಸೆಗೆಂದು ಹೆಸರಿಸುವ ಔಷಧಿಗಳ ಮೇಲಿನ ಜಿಎಸ್​ಟಿಯನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸಲಾಗಿದೆ.
    3) ಆಕ್ಸಿಜನ್, ಆಕ್ಸಿಜನ್ ಜನರೇಷನ್ ಎಕ್ಷಿಪ್​ಮೆಂಟ್​ ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲೆ ಹಾಲಿ ಇರುವ ಶೇ.12 ರಷ್ಟು ಜಿಎಸ್​ಟಿಯನ್ನು ಶೇ.5 ಕ್ಕೆ ಇಳಿಸಿದೆ. ಇದರಲ್ಲಿ ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ವೆಂಟಿಲೇಟರ್​ ಉಪಕರಣಗಳು ಸೇರಿವೆ.
    4) ಕೋವಿಡ್​ ಪರೀಕ್ಷೆಗೆ ಬಳಸುವ ಟೆಸ್ಟ್​ ಕಿಟ್​ಗಳು, ಯಂತ್ರಗಳು ಮತ್ತು ಪಲ್ಸ್​ ಆಕ್ಸಿಮೀಟರ್ ಮೇಲಿನ ಜಿಎಸ್​ಟಿಯನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಸಿದೆ.
    5) ಹ್ಯಾಂಡ್​ ಸ್ಯಾನಿಟೈಸರ್, ಟೆಂಪರೇಚರ್ ಚೆಕಿಂಗ್ ಆ್ಯಪರೇಟಸ್ ಮತ್ತು ಚಿತಾಗಾರಗಳಲ್ಲಿ ಬಳಸುವ ಗ್ಯಾಸ್ ಅಥವಾ ಎಲೆಕ್ಟ್ರಿಕ್ ಫರ್ನೇಸ್ ಯಂತ್ರಗಳ ಮೇಲೆ ಹಾಲಿ ಇರುವ ಶೇ. 18 ಜಿಎಸ್​ಟಿಯನ್ನು ಶೇ. 5 ಕ್ಕೆ ಇಳಿಸಿದೆ.
    6) ಆ್ಯಂಬುಲೆನ್ಸ್​ ಮೇಲಿನ ಹಾಲಿ ಶೇ.28 ರಷ್ಟು ಜಿಎಸ್​ಟಿಯನ್ನು ಶೇ. 12 ಕ್ಕೆ ಇಳಿಸಿದೆ.

    ಬಾರಾತ್​​ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ

    17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts