More

    ಜನವರಿಯಲ್ಲಿ ದಾಖಲೆಯ 1.15 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ: 1.13 ಕೋಟಿ ಸಂಗ್ರಹ ಹಿಂದಿನ ದಾಖಲೆಯಾಗಿತ್ತು

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪ್ರಸಕ್ತ ಜನವರಿಯಲ್ಲಿ ದಾಖಲೆಯ ಸಂಗ್ರಹ ತಲುಪಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

    ಜನವರಿ ಅಂತ್ಯದ ವೇಳೆಗೆ ಜಿಎಸ್​ಟಿ ಸಂಗ್ರಹ 1.15 ಲಕ್ಷ ಕೋಟಿ ರೂಪಾಯಿ ತಲುಪಲಿದೆ. ಇದೇ ವೇಳೆ ನೇರ ತೆರಿಗೆ 11 ಸಾವಿರ ಕೋಟಿ ರೂಪಾಯಿಗಳಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
    ಜನವರಿಯಲ್ಲಿ ಜಿಎಸ್ಟಿ ಸಂಗ್ರಹ 1.15 ಲಕ್ಷ ಕೋಟಿ ರೂ. ಆಗಲಿದೆ. ಅಂದಾಜು 40,000 ಕೋಟಿ ರೂಪಾಯಿ ಆದಾಯದ ಸೋರಿಕೆ ತಡೆಯಲಾಗಿದೆ. 2019ರ ಏಪ್ರಿಲ್​ನಲ್ಲಿ 1.13 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. 2019ರ ಡಿಸೆಂಬರ್​ನಲ್ಲಿ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.

    ಪ್ರಸಕ್ತ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ 2020 ಕ್ಕೆ 1.25 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹಿಸುವ ಗುರಿ ಹೊಂದಿದೆ.

    ಆರ್ಥಿಕತೆಯ ಕುಸಿತದ ನಡುವೆಯೂ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹಗಳು ಉತ್ತಮ ಹಾದಿಯಲ್ಲಿ ಸಾಗಿದೆ. 2019-2020ರಲ್ಲಿ ನಿವ್ವಳ ತೆರಿಗೆ ಆದಾಯದಲ್ಲಿ ಶೇ. 25 ಬೆಳವಣಿಗೆ ಗುರಿ ಹೊಂದಲಾಗಿದೆ. ಹಣಕಾಸು ಸಚಿವಾಲಯ ಬಜೆಟ್​ನಲ್ಲಿ 16.5 ಲಕ್ಷ ಕೋಟಿ ರೂ. ನಿವ್ವಳ ತೆರಿಗೆ ಸಂಗ್ರಹದ ಉಲ್ಲೇಖ ಮಾಡಲಿದೆ. 2019ರಲ್ಲಿ ವರ್ಷದ ಮೊದಲ ಎಂಟು ತಿಂಗಳಲ್ಲಿ ತೆರಿಗೆ ಉತ್ತಮವಾಗಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.4.5 ಕ್ಕೆ ಏರಿದೆ. ಇದು ಮಾರ್ಚ್ 2013 ರ ನಂತರದ ಅತ್ಯಂತ ಕಡಿಮೆ ಏರಿಕೆಯಾಗಿದೆ. 2019-20ರಲ್ಲಿ ಭಾರತದ ಜಿಡಿಪಿ ಶೇ.5 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಏರಿಕೆ 2008-09ಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts