More

    ಇವಿಷ್ಟು ಜನರ ಖಾತೆಗಳಿಗೆ ಶೀಘ್ರ ಗೃಹ ಲಕ್ಷ್ಮೀ ಹಣ

    ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮೀ ಯೋಜನೆಗೆ ಆ.30 ರಂದು ಬೆಳಗ್ಗೆ 11 ಗಂಟೆಗೆ ಚಾಲನೆ ದೊರೆಯಲಿದ್ದು, ಅದಕ್ಕೆ ಸಿದ್ಧತೆ ನಡೆದಿದೆ.

    ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಪ್ರಧಾನ ಕಾರ್ಯಕ್ರಮ ಆಯೋಜನೆಯಾಗಿದ್ದು, ಎಲ್ಲ ತಾಲೂಕುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಎಲ್ಲ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೆಂಗಳೂರಿನ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ.

    ಕಾರವಾರದ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಇದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಯ ತೆರಿಗೆ, ಜಿಎಸ್‌ಟಿ ಪಾವತಿಸದ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕುಟುಂಬಗಳ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ 7,10,913 ಮಹಿಳೆಯರು ಇದ್ದು, ಅವರಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು 3,46,835 ಮಹಿಳೆಯರು ಅರ್ಹರಿರುವರೆಂದು ಗುರುತಿಸಲಾಗಿದೆ.

    ಇದನ್ನೂ ಓದಿ:ಬೆಹಳ್ಳಿಯಲ್ಲಿ ನವಿಲು ಕೊಂದವ ಅಂದರ್

    ಈ ವರೆಗೆ 2,96,145 ಮಹಿಳೆಯರು ( 85.38) ಯೋಜನೆಯಡಿ ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿಯಲ್ಲಿ ಜಿಲ್ಲೆಯು ಮಟ್ಟದಲ್ಲಿ 10 ನೇ ಸ್ಥಾನದಲ್ಲಿದೆ.

    ಇದರ ನೋಂದಣಿಗೆ ಕೊನೆಯ ದಿನಾಂಕವಿಲ್ಲ. ನೋಂದಣಿಗೆ ಜಿಲ್ಲೆಯ207 ಗ್ರಾಮ ಒನ್ ಕೇಂದ್ರಗಳಲ್ಲಿ , 229 ಬಾಪೂಜಿ ಕೆಂದ್ರಗಳಲ್ಲಿ , 21 ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ 31 ಸ್ಥಳೀಯ ನಗರ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

    ಜಿಲ್ಲೆಯಲ್ಲಿ 1,17,335 ಫಲಾನುಭವಿಗಳಿಗೆ ತಲಾ 2 ಸಾವಿರದಂತೆ ಒಟ್ಟು ರೂ. 23,46,70,000 ರೂ. ಧನಸಹಾಯವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts