More

    ದಿನಸಿ ಕೂಪನ್ ಹಂಚಲು ಲಾಂಗ್​ನಿಂದ ಹೊಡೆದಾಟ!

    ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರಿಗೆ ದಿನಸಿ ಸಾಮಗ್ರಿಯ ಕೂಪನ್ ಹಂಚುವ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆಯಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿ ಕೊಂಡಿದ್ದಾರೆ. ಗಲಾಟೆಯಲ್ಲಿ ಅರಕೆರೆ ನಿವಾಸಿ ಕೃಷ್ಣ (53) ಹಾಗೂ ಮತ್ತೊಂದು ಗುಂಪಿನ ಯುವಕ ಮೈಕಲ್ (27) ಗಾಯಗೊಂಡಿದ್ದಾರೆ. ಕೃಷ್ಣನ ಕೈಬೆರಳುಗಳು ತುಂಡಾಗಿವೆ. ಇಬ್ಬರೂ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಕುರಿತು ಇಬ್ಬರು ಪರಸ್ಪರ ಆರೋಪಿಸಿ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಗಾಯಾಳು ಮೈಕಲ್, ಗಜ್ಜಿ ವೆಂಕಟೇಶ್, ಬಾಲಾಜಿ, ಮಧು ಹಾಗೂ ಕೃಷ್ಣ ಮತ್ತು ಈತನ ಪುತ್ರನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವವ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹುಳಿಮಾವು ಠಾಣೆ ಪೊಲೀಸರು ತಿಳಿಸಿದ್ದಾರೆ.

    ಏ.6ರಂದು ಕೃಷ್ಣ ಅರಕೆರೆಯ ಬಿಟಿಎಸ್ ಲೇಔಟ್ ನಲ್ಲಿ ಬಡವರಿಗೆ ದಿನಸಿ ಖರೀದಿಸುವ ಕೂಪನ್ ವಿತರಿಸು ತ್ತಿದ್ದರು. ಆಗ ಅಲ್ಲಿಗೆ ಹೋಗಿದ್ದ ಗಜ್ಜಿ ವೆಂಕಟೇಶ್ ಹಾಗೂ ಈತನ ಸಹಚರರು ಕೃಷ್ಣನಿಗೆ ಅವಾಚ್ಯವಾಗಿ ನಿಂದಿಸಿದ್ದರು. ಮಾತಿಗೆ ಮಾತು ಬೆಳೆದು ವೆಂಕಟೇಶ್ ಹಾಗೂ ಸಚಹರರು ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದರು. ಆಗ ಕೃಷ್ಣನ ಕೈಬೆರಳು ತುಂಡಾಗಿವೆ. ಬಳಿಕ ಮೈಕಲ್ ಕೈಯಿಂದ ಮಚ್ಚು ಕಸಿದುಕೊಂಡ ಕೃಷ್ಣ, ಪ್ರತಿದಾಳಿ ನಡೆಸಿದಾಗ ಮೈಕಲ್ ಗಾಯಗೊಂಡಿದ್ದಾನೆ. ಹಿಂದೆ ಎರಡು ಗುಂಪಿನ ನಡುವೆ ಗಲಾಟೆಯಾಗಿತ್ತು. ಹಳೇ ದ್ವೇಷಕ್ಕೆ ಮತ್ತೆ ಹೊಡೆದಾಡಿ ಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಾಪೂಜಿನಗರ, ಪಾದರಾಯನಪುರದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನವಾಗದ ಸೀಲ್​ಡೌನ್: ಆದರೂ ಮೋರಿಗೆ ಹಾರಿದ ಯುವಕ!

    ಲಾಕ್​ಡೌನ್​ನಿಂದಾಗಿ ನಿರಾಶ್ರಿತರಾದವರ ಕುರಿತು ಬಿಬಿಎಂಪಿ ಕೊಟ್ಟ ಮಾಹಿತಿಗೆ ಹೈಕೋರ್ಟ್​ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts