More

    ಅಡಕೆ ಬೆಳೆಗಾರರ ಟ್ವಿಟರ್ ಅಭಿಯಾನ!

    ತ್ಯಾಗರ್ತಿ: ಅಡಕೆ ಬೆಳೆಗಾರರನ್ನು ಎಲೆಚುಕ್ಕೆ ರೋಗದಿಂದ ರಕ್ಷಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿ¯್ಲೆಯ ಜನಪ್ರತಿನಿಽಗಳು ಮತ್ತು ಸಾರ್ವಜನಿಕ ಸಂಶೋಧನಾ ಸಂಸ್ಥೆ, ಕೇಂದ್ರ-ರಾಜ್ಯದ ತೋಟಗಾರಿಕಾ ಇಲಾಖೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಡಕೆ ಬೆಳೆಗಾರರು ಟ್ವಿಟರ್ ಅಭಿಯಾನ ಮೂಲಕ ಮನವಿ ಸಲ್ಲಿಸಿ ಹೋರಾಟ ಆರಂಭಿಸಿz್ದÁರೆ. ಅನೇಕ ರೈತರು, ಗಣ್ಯರು, ಸೆಲೆಬ್ರಿಟಿಗಳು ರಿಟ್ವೀಟ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿz್ದÁರೆ.

    ರಾಜಕೀಯ ಮುಖಂಡರು ತಮ್ಮ ಸಂದೇಶಗಳನ್ನು ಪ್ರಚುರಪಡಿಸುವ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಉದ್ದೇಶಕ್ಕೆ ರೈತರು ಕೂಡ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟ್ವಿಟರ್ ಅಭಿಯಾನಕ್ಕೆ ಮುಂದಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆರೋಗ ಈಗ ಸಾಗರ ಪ್ರಾಂತ್ಯದ ಎಲ್ಲ ಹೋಬಳಿಗಳಲ್ಲಿ ನಿಧಾನವಾಗಿ ವ್ಯಾಪಿಸಿರುವುದು ಅಡಕೆ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸುತ್ತಿದೆ.
    ಎಲೆಚುಕ್ಕೆ ರೋಗದ ಬಗ್ಗೆ ಹೆಚ್ಚಿನ ಸಂಶೋಧನೆ ಹಾಗೂ ನಿರ್ಮೂಲನೆಗೆ ಪರಿಹಾರ ಕಂಡುಕೊಳ್ಳಲು ಈ ಭಾಗದ ರೈತರು ಹಾಗೂ ಜನಪ್ರತಿನಿಽಗಳ ಒತ್ತಾಯದಿಂದ ಸರ್ಕಾರ ಕಳೆದ ವರ್ಷ ಅನುದಾನ ಘೋಷಿಸಿತ್ತು. ಆದರೆ ಇದರ ಸದ್ಬಳಕೆ ಆಗಲೇ ಇಲ್ಲ. ರೋಗ ಹರಡುವಿಕೆಯ ತೀವ್ರತೆ ತಗ್ಗಿಸಲೂ ಸಾಧ್ಯವಾಗಲಿಲ್ಲ. ದಿನೇದಿನೆ ಅಡಕೆ ಮರಗಳು ಒಣಗಿ ರೋಗ ಲಕ್ಷಣಗಳು ಹೆಚ್ಚಾಗುತ್ತಿವೆ. ಅನೇಕ ರೈತರು ತೋಟಗಾರಿಕೆ ಇಲಾಖೆ ಸೂಚನೆಯಂತೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ಔಷಧ ಸಿಂಪಡಿಸಿz್ದÁರೆ. ಕೆಲವು ಕಡೆಗಳಲ್ಲಿ ರೋಗ ಲಕ್ಷಣಗಳು ಕಂಡುಬAದ ಮರ ಹಾಗೂ ಅದರ ಸೋಗೆಯನ್ನು ಕಡಿದು ತೋಟದ ಹೊರಗೆ ತಂದು ಸುಟ್ಟು ಹಾಕಿz್ದÁರೆ. ಆದರೂ ರೋಗ ಉಲ್ಬಣವಾಗುತ್ತಲೇ ಇದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಔಷಧ ಕಂಡುಹಿಡಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನಕ್ಕೆ ನಾಡಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಚಲನಚಿತ್ರ ನಟ ದಿಗಂತ್ ಸೇರಿದಂತೆ ಅನೇಕರು ರಿಟ್ವೀಟ್ ಮಾಡಿ ಅಡಕೆ ಬೆಳೆಗಾರರ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿz್ದÁರೆ. ಟ್ವಿಟರ್ ಅಭಿಯಾನಕ್ಕೆ ದಿನೇದಿನೆ ಪ್ರತಿಕ್ರಿಯೆ ಹೆಚ್ಚಾಗುತ್ತಿದೆ. ಇದು ದೇಶದ, ರಾಜ್ಯದ ಉನ್ನತ ಮಟ್ಟದ ಅಽಕಾರಿಗಳ ಗಮನಕ್ಕೆ ಬಂದರೆ ಏನಾದರೂ ಸಹಾಯ ಆಗಬಹುದು ಎಂಬ ನಿರೀಕ್ಷೆ ಬೆಳೆಗಾರರದ್ದು.

    ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ಪರಿಹಾರಕ್ಕೆ ಆಗ್ರಹಿಸಿ ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ. ಆರು ಕೋಟಿ ರೈತರು ಹಾಗೂ ಕೂಲಿ ಕಾರ್ಮಿಕರು ಅಡಕೆ ಬೆಳೆಯನ್ನು ಅವಲಂಬಿಸಿz್ದÁರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಲಾಗಿದೆ. ಹಳ್ಳಿಯಲ್ಲಿ ಇದ್ದು ಡೆಲ್ಲಿಯಲ್ಲಿ ಇರುವ ದೊರೆಗಳನ್ನು ಟ್ವಿಟರ್ ಮೂಲಕ ತಲುಪಬಹುದು. ಅನೇಕ ಗ್ರಾಮೀಣ ಪ್ರದೇಶದ ಸಮಸ್ಯೆ ಬಗೆಹರಿಸಲು ಈ ಹಿಂದೆ ಟ್ವಿಟರ್ ಸಹಕಾರಿ ಆಗಿದೆ.
    |ನವೀನ್ ಜಿ. ಹೆಗಡೆ ಕೆಳಗಿನಮನೆ
    ಅಡಕೆ ಎಲೆಚುಕ್ಕೆ ರೋಗದ ಸಂತ್ರಸ್ತ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts