More

    ಹಳಿಯಾಳದಲ್ಲಿ ಅಂತರ್ಜಲ(ಗ್ರೌಂಡ್ ವಾಟರ್) ಕುಸಿತದ ಆತಂಕ

    ಕಾರವಾರ: ಜಿಲ್ಲೆಯ ಅಂತರ್ಜಲ (ಗ್ರೌಂಡ್ ವಾಟರ್) ಮಟ್ಟ ಈ ವರ್ಷ ತೀವ್ರ ಕುಸಿತ ಕಂಡಿದ್ದು, ಅರಣ್ಯ ಜಿಲ್ಲೆ ಎಂಬ ಹೆಗ್ಗಳಿಕೆಯ ಉತ್ತರ ಕನ್ನಡಕ್ಕೆ ಇದು ಎಚ್ಚರಿಕೆ ಗಂಟೆಯಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಮಾರ್ಚ್ ತಿಂಗಳ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಅತಿ ಕನಿಷ್ಠಕ್ಕೆ ತಲುಪಿರುವುದನ್ನು ಜಿಲ್ಲಾ ಅಂತರ್ಜಲ ಇಲಾಖೆಯ ದತ್ತಾಂಶಗಳು ತಿಳಿಸುತ್ತವೆ. ಇನ್ನೆರಡು ತಿಂಗಳಲ್ಲಿ ಈ ಪ್ರಮಾಣ ಇನ್ನಷ್ಟು ಇಳಿಕೆಯಾಗುವ ಲಕ್ಷಣಗಳಿದ್ದು, ಕೆಲವೆಡೆ ಕುಡಿಯುವ ನೀರಿಗೂ ತೀವ್ರ ತುಟಾಗ್ರತೆ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

    ಸರಾಸರಿ ಅಂತರ್ಜಲ ಪ್ರಮಾಣ ಕುಸಿತ

    2021ರ ಮಾರ್ಚ್‌ನಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಪ್ರಮಾಣವು 7.90 ಮೀಟರ್ ಆಳವಿತ್ತು. 2022 ರಲ್ಲಿ 7.74 ಮೀಟರ್ ಕೆಳಗಿತ್ತು. ಈ ವರ್ಷ ಈ ಪ್ರಮಾಣ 8.75 ಮೀಟರ್‌ಗೆ ಇಳಿಕೆ ಕಂಡಿದೆ. ಈ ಬಾರಿ ಜನವರಿಯಲ್ಲಿ ಸರಾಸರಿ 6.76 ಮೀಟರ್ ಇತ್ತು. ೆಬ್ರವರಿಯಲ್ಲಿ 7.26 ಮೀಟರ್ ಇತ್ತು.

    ಹಳಿಯಾಳದಲ್ಲಿ ಅತಿ ಕಡಿಮೆ

    ಹಳಿಯಾಳದಲ್ಲಿ ಅಂತರ್ಜಲ(ಗ್ರೌಂಡ್ ವಾಟರ್) ಕುಸಿತದ ಆತಂಕ


    ಜಿಲ್ಲೆಯ ಮೇ ತಿಂಗಳ ಅತಿ ಕನಿಷ್ಠ ಅಂತರ್ಜಲ ಮಟ್ಟವು (2015-2019 ರ ಸರಾಸರಿ ದತ್ತಾಂಶ) 19.9 ಮೀ.ರಷ್ಟಿದೆ. ಆದರೆ, ಹಳಿಯಾಳ ತಾಲೂಕಿನಲ್ಲಿ ಈ ವರ್ಷ ಮಾರ್ಚ್ ಅಂತ್ಯಕ್ಕೇ ಸರಾಸರಿ 21.03 ಕ್ಕೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಜನವರಿಯಲ್ಲಿ 7.95 ಮೀ. ೆಬ್ರವರಿಯಲ್ಲಿ 9.21 ಮೀ. ಇದ್ದ ಅಂತರ್ಜಲ ಪ್ರಮಾಣವು ಮಾರ್ಚ್ ತಿಂಗಳಲ್ಲಿ ಇದ್ದಕ್ಕಿದ್ದಂತೆ 10 ಮೀಟರ್ ಇಳಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. 2021 ರ ಮಾರ್ಚ್‌ನಲ್ಲಿ 11.92 ಮೀಟರ್, 2022 ರಲ್ಲಿ 15.16 ಮೀಟರ್ ತಲುಪಿತ್ತು. ಇದೇ ಮೊದಲ ಬಾರಿಗೆ ಇಷ್ಟು ಕೆಳಕ್ಕೆ ಇಳಿದಿದೆ. ಹೆಚ್ಚುತ್ತಿರುವ ಕಬ್ಬಿನ ಬೆಳೆಯ ಪ್ರಮಾಣ ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಭೂ ವಿಜ್ಞಾನಿಗಳು.
    ಹಳಿಯಾಳ ಬಿಟ್ಟರೆ ಯಲ್ಲಾಪುರ ಹಾಗೂ ಸಿದ್ದಾಪುರದಲ್ಲಿ ನೀರಿನ ಮಟ್ಟ 10 ಮೀಟರ್‌ಗಿಂತ ಕೆಳಗೆ ಹೋಗಿದೆ. ಸಿದ್ದಾಪುರದಲ್ಲಿ 10.02 ಮೀಟರ್ ಯಲ್ಲಾಪುರದಲ್ಲಿ 10.98 ಕ್ಕೆ ಇಳಿದಿದೆ. ಕಾರವಾರದಲ್ಲಿ ಅಂತರ್ಜಲ ಮಟ್ಟ ಅತಿ ಹೆಚ್ಚು ಎಂದರೆ 4.56 ಮೀಟರ್ ಹಾಗೂ ದಾಂಡೇಲಿಯಲ್ಲಿ 5.50 ಮೀಟರ್ ಇದೆ ಎಂದು ಅಂತರ್ಜಲ ಇಲಾಖೆಯ ದಾಖಲೆಗಳು ಹೇಳುತ್ತವೆ.

    ಲೆಕ್ಕಾಚಾರ ಹೇಗೆ..?

    ಸಣ್ಣ ನೀರಾವರಿ ಇಲಾಖೆಯಡಿ ಕಾರವಾರದಲ್ಲಿರುವ ಅಂತರ್ಜಲ ಅಭಿವೃದ್ಧಿ ಇಲಾಖೆಯ ಭೂ ವಿಜ್ಞಾನಿಗಳು ಜಿಲ್ಲಾದ್ಯಂತ ವಿವಿಧೆಡೆ ಗುರುತಾದ 106 ಬೋರ್‌ವೆಲ್ ಹಾಗೂ ತೆರೆದ ಬಾವಿಗಳ ಅಂತರ್ಜಲ ಮಟ್ಟವನ್ನು ಪ್ರತಿ ತಿಂಗಳು ಪರಿಶೀಲಿಸಿ ದಾಖಲಿಸುತ್ತಾರೆ. ಭೂಮಿಯ ಮೇಲ್ಮೈಯಿಂದ ನೀರು ಎಷ್ಟು ಕೆಳಗಿದೆ ಎಂದು ಉಪಕರಣದಿಂದ ಪರಿಶೀಲಿಸಲಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಬಂದಾಗ ಬಾವಿಗಳ ನೀರು ಕಡಿಮೆಯಾಗುತ್ತದಾದರೂ ಈ ಬಾರಿ ಈ ಪ್ರಮಾಣ ಹೆಚ್ಚಿದೆ.

    2023 ಮಾರ್ಚ್ ತಿಂಗಳ ಅಂತ್ಯದ ಅಂತರ್ಜಲ ಮಟ್ಟ (ಭೂಮಿ ಮೇಲ್ಮೈಯಿಂದ ಆಳ ಮೀಟರ್‌ಗಳಲ್ಲಿ )

    • ತಾಲೂಕು 2021 2022 2023
    • ಅಂಕೋಲಾ 8.58 7.94 8.49
    • ಭಟ್ಕಳ 6.37 5.89 6.21
    • ಹಳಿಯಾಳ 11.92 15.16 21.03
    • ಹೊನ್ನಾವರ 8.71 8.44 9.17
    • ಕಾರವಾರ 5.14 4.15 4.56
    • ಕುಮಟಾ 6.37 5.99 6.90
    • ಮುಂಡಗೋಡ 6.81 6.23 7.60
    • ಸಿದ್ದಾಪುರ 9.92 9.84 10.02
    • ಶಿರಸಿ 7.66 7.64 8.12
    • ಜೊಯಿಡಾ 6.98 6.08 6.41
    • ಯಲ್ಲಾಪುರ 10.62 10.32 10.98
    • ದಾಂಡೇಲಿ 5.69 5.26 5.50

    ರಾಜ್ಯದ ಒಟ್ಟಾರೆ ಅಂತರ್ಜಲ ಪ್ರಮಾಣಕ್ಕೆ ಹೋಲಿಸಿದರೆ ಉತ್ತರ ಕನ್ನಡ ಸುರಕ್ಷಿತ ವಲಯದಲ್ಲಿದೆ. ಈ ಬಾರಿ ಬೇಸಿಗೆಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟದಲ್ಲಿ ಇಳಿಕೆ ಕಂಡಿದೆ. ಜಿಲ್ಲೆ ಸುರಕ್ಷಿತ ವಲಯದಲ್ಲಿದೆ ಎಂದು ಜನ ಮನಸೋ ಇಚ್ಛೆ ನೀರು ಬಳಸುವುದು ಸೂಕ್ತವಲ್ಲ. ನೀರು ಬಳಕೆಯಲ್ಲಿ ಕಾಳಜಿ ವಹಿಸುವ ಅಗತ್ಯವಿದೆ.
    – ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts