More

    ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?

    ಲಖನೌ: ಉತ್ತರ ಪ್ರದೇಶದ ಜುನ್ಸಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ ನಿಗದಿತ ಸಮಯಕ್ಕೆ ಬಾರದೆ ಹೋಗಿದ್ದು, ಇದರಿಂದ ಬೇಸತ್ತ ವಧು ಅದೇ ಮುಹೂರ್ತದಲ್ಲಿ ತನ್ನ ಭಾವನನ್ನು ವರಿಸಿ ಮದುವೆ ಮಾಡಿಕೊಂಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಸೈಕ್ಲಿಂಗ್​ ಮಾಡುವಾಗ ಕ್ಯಾಬ್​ ಡಿಕ್ಕಿ: ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತ್ಯು

    ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯವರ ಸಾಮೂಹಿಕ ವಿವಾಹ ಯೋಜನೆಯಡಿ ನವದಂಪತಿಗಳಿಗೆ 51 ಸಾವಿರ ರೂ. ನೀಡುತ್ತಿದೆ. ಈ ಪ್ರಯೋಜನ ಪಡೆಯಲು ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

    ಝಾನ್ಸಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸಿಎಂ ಸಾಮೂಹಿಕ ವಿವಾಹ ಸಮಾರಂಭದಲ್ಲಿ 132 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಭಾಗವಹಿಸಲು ದೂರದ ಊರುಗಳಿಂದ ಮದುಮಗಳು ಆಗಮಿಸಿದ್ದರು. ಝಾನ್ಸಿ ಬಳಿಯ ಬಾಮೂರ್‌ನ ಖುಷಿ ಮಧ್ಯಪ್ರದೇಶದ ಛತ್ತರ್‌ಪರ್‌ನ ವೃಷ್ ಭಾನು ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು.

    ಈ ಜೋಡಿಯ ವಿವಾಹ ನೋಂದಣಿ ಸಂಖ್ಯೆ 36. ನಿಯಮದಂತೆ ವಧು- ವರರು ಮೊದಲೇ ತಮ್ಮ ವಿವರ ನೋಂದಾಯಿಸಿದ್ದರು. ಮದುವೆಯ ವೇದಿಕೆಯಲ್ಲಿ ಖುಷಿ ಪಕ್ಕದಲ್ಲಿ ವರನಾಗಿ ಇನ್ನೊಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ವಿಚಾರಿಸಿದಾಗ ವರ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದು ಹೇಳಿ ನಕಲಿ ವರ(ಭಾವ) ಹೇಳಿದ್ದಾನೆ.

    ಸರ್ಕಾರಿ ಕಾನೂನಿನಂತೆ ವರ ಅಥವಾ ವಧು 2 ನೇ ಮದುವೆಯಾಗುವಂತಿಲ್ಲ. ಆದರೆ ಹಿರಿಯರ ಸಲಹೆ ಮೇರೆಗೆ ಭಾವ ತನ್ನ ಸೋದರತ್ತೆ ಮಗಳಾದ ವಧುವಿಗೆ ತಾಳಿಕಟ್ಟಲು ಅಣಿಯಾಗಿ ಕುಳಿತಿದ್ದ. ಆತನಿಗೆ ಈಗಾಗಲೇ ಮದುವೆಯಾಗಿದ್ದು, 51 ಸಾವಿರ ಸರ್ಕಾರಿ ಹಣ ಬರುತ್ತದೆ ಎಂದು ಎಲ್ಲರೂ ಸೇರಿ ಇಂತಹ ಕಾರ್ಯಕ್ಕೆ ಇಳಿದಿದ್ದರು. ಈ ಅವ್ಯವಹಾರದಲ್ಲಿ ಸರ್ಕಾರಿ ನೌಕರರೂ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಲಿತಾ ಯಾದವ್ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

    ಅಕ್ರಮ ಮಸೀದಿ ಕೆಡವಲು ಹೈಕೋರ್ಟ್ ಆದೇಶಿಸಿದ್ದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts