More

    ತಾಳಿ ಕಟ್ಟುವ ಮೊದಲು ಬಂದು ಪರೀಕ್ಷೆ ಬರೆದ ವರ; ತಲೆಗೆ ಪೇಟ, ಸೂಟು, ಬೂಟು ಧರಿಸಿದ ಪರೀಕ್ಷಾರ್ಥಿ

    ಉತ್ತರಪ್ರದೇಶ: ವರನೊಬ್ಬ ಸೂಟು ಮತ್ತು ಬೂಟು  ಧರಿಸಿ ಕಾನ್ಸಟೇಬಲ್‌ ಎಕ್ಸಾಮ್‌ ನಡೆಯುತ್ತಿರುವ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿಡಿಯೋ ವೈರಲ್‌ ಆಗಿದೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಈ ವಿಶಿಷ್ಟ ದೃಶ್ಯ ಕಂಡುಬಂದಿದೆ. 

     ಪೊಲೀಸ್ ನೇಮಕಾತಿ ಪರೀಕ್ಷೆ ನಡೆಯುವಾಗ ವರನೊಬ್ಬ ಪರೀಕ್ಷೆ ಬರೆಯಲು ಕೇಂದ್ರಕ್ಕೆ ಬಂದಿದ್ದಾನೆ.   ವರನ ಹೆಸರು ಪ್ರಶಾಂತ್ ನಾಮದೇವ್. ಪರೀಕ್ಷೆ ದಿನವೇ ಮದುವೆ ಇತ್ತು. ಹೀಗಾಗಿ ಪ್ರಶಾಂತ್‌  ಮದುವೆಗೂ ಮೊದಲು  ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾನೆ.  

    ಫೆಬ್ರವರಿ 18 ರಂದು ಎರಡನೇ ಪಾಳಿಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ನಡೆಯಬೇಕಿತ್ತು ಮತ್ತು ಅದೇ ದಿನ ಪ್ರಶಾಂತ್ ಅವರ ಮದುವೆಯ ಮೆರವಣಿಗೆಯೂ ಹೋಗಬೇಕಾಗಿತ್ತು, ಆದ್ದರಿಂದ ಪ್ರಶಾಂತ್ ಮದುವೆ ಸಮಾರಂಭವನ್ನು ನೆರವೇರಿಸಿ ನಂತರ ಪರೀಕ್ಷೆಗೆ ಸಮಯಕ್ಕೆ ಕೇಂದ್ರಕ್ಕೆ ತಲುಪಿದರು. ಮದುವೆಗೆ ಮುಂಚೆಯೇ ಪ್ರಶಾಂತ್‌ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ತನ್ನ ಪರೀಕ್ಷಾ ಕೇಂದ್ರವನ್ನು ತಲುಪಿದನು.

    ದೇಶಸೇವೆ ಮಾಡಬೇಕೆಂಬ ಆಸೆಯಿದ್ದು, ಮದುವೆಗಿಂತ ವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ  ಹೀಗಾಗಿ ಪೆಈಕ್ಷೆ ಬರೆಯಲು ಬಂದಿದ್ದೇನೆಂದು ವರ ಹೇಳಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts