More

    ಮೊಬೈಲ್ ನೆಟ್‌ವರ್ಕ್ ಸಿಗದೆ ಗೃಹಲಕ್ಷ್ಮೀ ಯರ ಪೇಚಾಟ

    ಮೂಡಿಗೆರೆ: ಗೃಹಲಕ್ಷ್ಮೀ ಯೋಜನೆಯ ನೊಂದಣಿ ಆರಂಭಗೊಂಡ ಮೊದಲ ದಿನ ತಾಲೂಕಿನಲ್ಲಿ ಮಳೆ ಹೆಚ್ಚಾಗಿದ್ದರಿಂದ ಜನ ಮನೆಯಿಂದ ಹೊರಬಂದಿರಲಿಲ್ಲ. ಕೆಲ ಫಲಾನುಭವಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಪರದಾಡಿದರು. ಶುಕ್ರವಾರ ವಾರದ ಸಂತೆಗೆ ಬಂದಿದ್ದವರು ನೋಂದಣಿಗೂ ದಾಖಲೆಗಳನ್ನು ತಂದಿದ್ದರು. ಆದರೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಒಟಿಪಿ ಪಡೆಯಲು ಸಾಧ್ಯವಾಗದೆ ಪರದಾಡಿದರು.
    ಪ್ರತಿದಿನ ತಾಲೂಕಿನಲ್ಲಿ 1,480 ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಗ್ರಾಮ ಒನ್ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಂದೇಶ ಬರುತ್ತದೆ. ಅರ್ಜಿ ಸಲ್ಲಿಸಲು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಮಯ ನಿಗದಿಪಡಿಸಲಾಗಿದೆ. ಬಹಳಷ್ಟು ಮಂದಿ ಮೆಸೇಜ್ ವೀಕ್ಷಿಸದ ಕಾರಣ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಗೊತ್ತಾಗಿಲ್ಲ.
    ಊರುಬಗೆ, ತ್ರಿಪುರ, ಕುಂದೂರು, ಬಾಳೂರು, ನಿಡುವಾಳೆ ಸೇರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇರಲಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಕರೆ ಮಾಡಿ ಅರ್ಜಿ ಸಲ್ಲಿಸಲು ದಾಖಲೆಯೊಂದಿಗೆ ಗ್ರಾಪಂಗೆ ಬರುವಂತೆ ಮನವಿ ಮಾಡಿದ್ದರಿಂದ ನೊಂದಣಿ ಮಾಡಿಸಲು ಬಂದಿದ್ದರು. ಆದರೆ ಮೊಬೈಲ್‌ನಲ್ಲಿ ನಟ್‌ವರ್ಕ್ ಸಿಗದೆ ಒಟಿಪಿ ಪಡೆಯಲಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts