More

    ಗೃಹಲಕ್ಷ್ಮಿ ಯೋಜನೆ ಕುರಿತು ಶಿಬಿರ

    ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಪಂ ಕಚೇರಿಯಲ್ಲಿ ಗುರುವಾರ ಗಹಲಕ್ಷ್ಮಿ ಯೋಜನೆ ಹಣ ಜಮೆ ಕುರಿತು ಎದುರಾಗಿರುವ ತಾಂತ್ರಿಕ ತೊಂದರೆಗಳ ಪರಿಹಾರಕ್ಕಾಗಿ ಶಿಬಿರ ಆಯೋಜಿಸಲಾಗಿತ್ತು.

    ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ, ಹೊಸ ಬ್ಯಾಂಕ್ ಖಾತೆ ತೆರೆಯುವುದು, ಇ-ಕೆವೈಸಿ ಅಪ್ಡೇಟ್, ಗಹಲಕ್ಷ್ಮಿ ಯೋಜನೆ ಸ್ಥಿತಿ ಪರಿಶೀಲನೆ ಬಗ್ಗೆ ವಿವರಿಸಲಾಯಿತು. ಈಗಾಗಲೇ ಪಡಿತರ ಅಕ್ಕಿ ಹಣ ಅಥವಾ ಗಹಲಕ್ಷ್ಮಿ ಹಣ ಜಮೆ ಆಗಿದ್ದರೆ, ಆ ಬ್ಯಾಂಕ್ ಖಾತೆ ಸರಿಯಾಗಿದೆ ಎಂದರ್ಥ. ಯಾವುದೆ ಒಂದು ಯೋಜನೆ ಹಣ ಜಮೆ ಆಗದಿದ್ದರೆ, ಅದು ಬ್ಯಾಂಕ್ ಖಾತೆ ಸಮಸ್ಯೆಯಲ್ಲ. ಅದನ್ನು ಸಂಬಂಧಿತ ಅಧಿಕಾರಿಗಳೇ ಪರಿಶೀಲಿಸಬೇಕೆಂದು ಬ್ಯಾಂಕ್ ಪ್ರತಿನಿಧಿಗಳು ಸ್ಪಷ್ಟಪಡಿಸಿದರು.

    ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಯೋಜನೆ ಹಣ ಸಂದಾಯದ ಕುರಿತು ಅಕೌಂಟ್ ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕು. ಅಲ್ಲಿ ಪಡೆದ ಮಾಹಿತಿಯಲ್ಲಿ ಬ್ಯಾಂಕ್ ಖಾತೆ ತಾಂತ್ರಿಕ ತೊಂದರೆ ಕಂಡು ಬಂದರೆ, ಸಂಬಂಧಿತ ಬ್ಯಾಂಕ್‌ಗಳಿಗೆ ಹೋಗಿ ಸರಿಪಡಿಸಿಕೊಳ್ಳಬೇಕು ಎಂದು ವಿವರಿಸಲಾಯಿತು.

    ಪಿಡಿಒ ಜಯರಾಮ್ ಕಾದ್ರೊಳ್ಳಿ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ತಿಗಡಿ, ಉಪಾಧ್ಯಕ್ಷ ಉಮೇಶ ಶಿದ್ರಾಮನಿ, ಸದಸ್ಯರಾದ ಬೀಬಿಜಾನ ಕಡೇಮನಿ, ಸಲ್ಮಾನದಾರ್, ವಿವಿಧ ಬ್ಯಾಂಕ್ ಪ್ರತಿನಿಧಿಗಳಾದ ಎಂ.ಎ.ನೇಸರಗಿ, ಎಸ್.ಎಂ.ಪಿರಜಾದೆ, ಜೆ.ಎನ್.ಕುಮಾರ್, ರವಿರಾಜ ಗೌಡರ, ಲಕ್ಷ್ಮೀ ಗಾಣಿಗೇರ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts