More

    ಸರಗೂರಿನಲ್ಲಿ ಕುಂದುಕೊರತೆ ಸಭೆ

    ಸರಗೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.

    ಈ ವೇಳೆ ಮಾತನಾಡಿ ಶಾಸಕ ಅನಿಲ್ ಚಿಕ್ಕಮಾದು, ಸಾರ್ವಜನಿಕರು ಸಲ್ಲಿಸುವ ಕುಂದುಕೊರತೆಗಳ ಅಹವಾಲು ಅರ್ಜಿಗಳನ್ನು ಸಂಬಧಿಸಿದ ಇಲಾಖೆಗಳಿಗೆ ವರ್ಗಾವಣೆ ಮಾಡಿ ನಿಗದಿತ ಕಾಲಾವಧಿಯಲ್ಲಿ ಅಧಿಕಾರಿಗಳಿಂದ ಅನುಪಾಲನಾ ವರದಿಯನ್ನು ಪಡೆದು ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

    ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿದರು. ಶಾಸಕರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಪಡೆಯಲಾಗುವುದು. ನಾಗರಿಕರು ಸ್ಥಳೀಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ತಿಳಿಸಬೇಕು ಎಂದರು.

    ಈ ವೇಳೆ ಅಹವಾಲು ಸಲ್ಲಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶಂಭುಲಿಂಗನಾಯಕ, ಸುಮಾರು ಭಾಗದಲ್ಲಿ ರಸ್ತೆಗಳ ಬದಿಯಲ್ಲಿ ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಕುಂದೂರು ಗ್ರಾಮದ ಚಿಕ್ಕದೇವಮ್ಮನ ದೇವಸ್ಥಾನದ ಜಾತ್ರೆ ಮಾಳವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಈ ಸಂಬಂಧ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಬಿರವಾಳು ಚಿಕ್ಕಣ್ಣ ಮಾತನಾಡಿ, ತಾಲೂಕಿನ ಸುಮಾರು ಗ್ರಾಮಗಳಲ್ಲಿ ಸ್ಮಶಾನ ಜಾಗ ಇಲ್ಲ. ಕಂದಾಯ ಇಲಾಖೆ ಸಿಬ್ಬಂದಿ ಜಾಗವನ್ನು ಜನರಿಗೆ ನೀಡಿಲ್ಲ ಎಂದು ತಿಳಿಸಿದರು. ರಸ್ತೆ ದುರಸ್ತಿ, ಗ್ರಾಮ ಪಂಚಾಯಿತಿಗಳಲ್ಲಿ ಖಾತೆಗಳನ್ನು ಮಾಡಲು ಅಧಿಕಾರಿಗಳ ವಿಳಂಬ ಧೋರಣೆ, ಸ್ಮಶಾನ ಸ್ಥಳ ಕೊರತೆ ಹಲವು ಸಮಸ್ಯೆಗಳಿಂದ ಸಂಬಂಧಿಸಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಶಾಸಕರಿಗೆ ಅಹವಾಲು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.

    ಸಭೆಯಲ್ಲಿ ತಹಸೀಲ್ದಾರ್ ರುಕೀಯಾ ಬೇಗಂ, ತಾಲೂಕು ಪಂಚಾಯಿತಿ ಇಒ ಸುಷ್ಮಾ, ಪಪಂ ಮುಖ್ಯಾಧಿಕಾರಿ ಎಸ್.ಎಸ್. ಮಂಜುನಾಥ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ.ಕೆ.ಬೋರಯ್ಯ, ಜಿಲ್ಲಾ ಪಂಚಾಯಿತಿ ಎಇಇ ನಾಗರಾಜು, ಲಿಂಗರಾಜು, ಸಬ್‌ಇನ್ಸ್‌ಪೆಕ್ಟರ್ ನಂದೀಶ್ ಕುಮಾರ್, ಪಪಂ ಸದಸ್ಯರಾದ ಶ್ರೀನಿವಾಸ್, ಚೆಲುವ ಕೃಷ್ಣ, ಶಿವಕುಮಾರ್, ಜಿಪಂ ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ಪಿ.ರವಿ, ಭಾಗ್ಯಲಕ್ಷ್ಮಿ, ಮುಖಂಡರಾದ ನಾಗರಾಜು, ಕಂದೇಗಾಲ ಶಿವರಾಜು, ಕೆಂಡಗಣ್ಣಸ್ವಾಮಿ, ಸುಭಾನ್, ಪುಟ್ಟಸ್ವಾಮಿ, ಶಿವಚನ್ನಪ್ಪ, ಮಹೇಶ್, ಬಿಲ್ಲಯ್ಯ, ಇಂದಿಯಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts