More

    ಹೆಸರು ಬೆಳೆಗೆ ವಕ್ಕರಿಸಿದ ಹಳದಿ ಎಲೆ ರೋಗ, ಆತಂಕದಲ್ಲಿ ಹೋಬಳಿ ವ್ಯಾಪ್ತಿಯ ರೈತರು

    ಹನುಮಸಾಗರ: ಸ್ಥಳೀಯ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬೆಳೆಗೆ ಹಳದಿ ಎಲೆ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ಮುಂಗಾರು ಆರಂಭದಲ್ಲಿ ಭರಣಿ ಮತ್ತು ಕೃತ್ತಿಕಾ ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಹೋಬಳಿ ವ್ಯಾಪ್ತಿಯಲ್ಲಿ 750 ಹೆಕ್ಟೇರ್ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ, ನಂತರ ರೋಹಿಣಿ ಮತ್ತು ಮೃಗಶಿರ ಮಳೆ ಕೈಕೊಟ್ಟಿರುವುದು ಹಾಗೂ ಹಳದಿ ಎಲೆ ರೋಗ ಕಾಣಿಸಿಕೊಂಡಿರುವುದು ರೈತರ ಲೆಕ್ಕಾಚ್ಚಾರ ತೆಲೆಕೆಳಗಾಗುವಂತೆ ಮಾಡಿದೆ. ರೋಗ ಕಾಣಿಸಿಕೊಂಡಿದ್ದರಿಂದ ಕಾಯಿಗಳು ಚಿಕ್ಕದಾಗುತ್ತಿದ್ದು, ಕಾಯಿಯಲ್ಲಿ ಕಾಳುಗಳು ಚಿಕ್ಕದಾಗುತ್ತಿವೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

    ಬಿತ್ತನೆ ಸಂದರ್ಭದಲ್ಲಿ ಸರಿಯಾಗಿ ಬೀಜೋಪಚಾರ ಮಾಡದ ಕಾರಣ ಬಾಣಂತಿ ರೋಗ ಕಾಣಿಸಿಕೊಳ್ಳುತ್ತದೆ. ರೋಗದ ಗಿಡಗಳನ್ನು ಕಿತ್ತು ಮಣ್ಣಲ್ಲಿ ಮುಚ್ಚಬೇಕು ಅಥವಾ ಸುಟ್ಟು ಹಾಕಬೇಕು. ನಂತರ ಉಳಿದ ಬೆಳೆಗೆ ಪ್ರತಿ ಲೀಟರ್ ನೀರಿಗೆ 0.5 ಎಂ.ಎಲ್. ಇಮುಡಾಕ್ಲೊಪಿಡ್ ಔಷಧ ಬೆರೆಸಿ ಸಿಂಪಡಣೆ ಮಾಡಬೇಕು. ರೋಗ ಕಾಣಿಸಿಕೊಳ್ಳದ ಹೊಲಗಳಿಗೂ ಮುನ್ನಚ್ಚೆರಿಕೆಯಾಗಿ ಔಷಧ ಸಿಂಪಡಣೆ ಮಾಡುವುದು ಒಳ್ಳೆಯದು.
    | ಪ್ರಕಾಶ ತಾರಿವಾಳ, ಕೃಷಿ ಅಧಿಕಾರಿ ಹನುಸಾಗರ ರೈತ ಸಂಪರ್ಕ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts