More

    ಮಹಾ ಮಳೆ… ಎಲ್ಲೆಲ್ಲೂ ನೀರಿನ ಹೊಳೆ

    ಬೆಳಗಾವಿ: ಮಹಾರಾಷ್ಟ್ರದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿತೀರದ ಜನರಲ್ಲಿ ಮತ್ತೆ ಪ್ರವಾಹ ಆತಂಕ ಶರುವಾಗಿದೆ. ಕೃಷ್ಣಾ ನದಿ, ಮಲಪ್ರಭಾ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ಒಳ ಹರಿವು ಏರಿಕೆಯಾಗಿದೆ.

    ನೀರು ಬಿಡುಗಡೆ: ನವಿಲುತೀರ್ಥ ಜಲಾಶಯದಲ್ಲಿ 15 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಹೆಚ್ಚಾಗಿದ್ದು, 11 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬೆಳಗಾವಿಯ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ಇಲ್ಲಿಂದಲೂ ನೀರು ಬಿಡಲಾಗುತ್ತಿದೆ. ಹಿಡಕಲ್ ಜಲಾಶಯದಿಂದ 40,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.

    ಅಪಾರ ಪ್ರಮಾಣದಲ್ಲಿ ಬೆಳೆಹಾನಿ: ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದ್ದು, ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಹಾನಿಯಾಗಿದೆ. ಉಚಗಾಂವ, ಕಂಗ್ರಾಳಿ, ಸುತ್ತಲಿನ ಹೊಲ- ಗದ್ದೆಗೆ ನೀರು ನುಗ್ಗುತ್ತಿದ್ದು, ನಾಟಿ ಮಾಡಿದ ಭತ್ತದ ಪೈರು ಮಳೆನೀರಿನಲ್ಲಿ ಮುಳುಗಿದೆ. ಹೀಗಾಗಿ ರೈತರಿಗೆ ಮತ್ತೆ ಬೆಳೆಹಾನಿಯಿಂದ ಆರ್ಥಿಕ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

    ಕೃಷಿ ಇಲಾಖೆ ಕಳೆದ ಬಾರಿ ಹಾನಿ ಸಮೀಕ್ಷೆ ಮಾಡುವಾಗ ಮಳೆ ಕಾರಣದಿಂದಾಗಿ ಜಿಪಿಎಸ್ ಮಾಡಲು ಬರುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ರೈತರಿಗೆ ಬೆಳೆ ಪರಿಹಾರ ಸಿಗುವುದು ಅನುಮಾನ ಎಂದು ರೈತರು ಕೊರಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts