More

    ಮಹಾನ್ ವ್ಯಕ್ತಿಗಳ ಆದರ್ಶ ಪ್ರತಿಯೊಬ್ಬರೂ ಪಾಲಿಸಿ

    ರಾಯಬಾಗ: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಇವರಿಬ್ಬರು ದೇಶದ ಮತ್ತು ದಲಿತರ ಎರಡು ಕಣ್ಣುಗಳಿದ್ದಂತೆ. ಅವರ ತ್ಯಾಗ, ಪರಿಶ್ರಮದಿಂದ ನಾವೆಲ್ಲರೂ ಇಂದು ಉನ್ನತ ಸ್ಥಾನಕ್ಕೆ ಬಂದಿದ್ದೇವೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್‌ರಾಮ್ ಅವರ 113 ನೇ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ಇಬ್ಬರು ಮಹಾನ್ ವ್ಯಕ್ತಿಗಳ ಆದರ್ಶ, ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸ್ವಾಭಿಮಾನದ ಜೀವನ ನಡೆಸಬೇಕು. ದಲಿತರು, ಕಡುಬಡವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ಕೊಡಿಸುವುದು ಪಾಲಕರ ಕರ್ತವ್ಯವಾಗಿದೆ ಎಂದರು.

    ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ತಾಪಂ ಇಒ ಪ್ರಕಾಶ ವಡ್ಡರ, ಸಿಪಿಐ ಕೆ.ಎಸ್. ಹಟ್ಟಿ, ತಾಲೂಕು ಅನುಷ್ಠಾನಾಧಿಕಾರಿ ಆರ್.ಎಫ್. ಹಂದಿಗುಂದ, ಪಿ.ಎಸ್. ಪತ್ತಾರ, ಇಂದುಧರ ಹಿರೇಮಠ, ಡಾ. ಎಸ್.ಎಸ್. ಬಾನೆ, ಎಸ್.ಆರ್. ಪಾಟೀಲ, ಸಂತೋಷ ಕಾಂಬಳೆ, ಎಸ್.ಆರ್. ಪಾಟೀಲ, ಎಚ್.ಎ. ಭಜಂತ್ರಿ, ಮುಖಂಡರಾದ ರಾಜು ಮೈಶಾಳೆ ಮತ್ತು ಇತರರು ಉಪಸ್ಥಿತರಿದ್ದರು. ಅಧಿಕಾರಿಗಳು ಮತ್ತು ಶಾಸಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಸರಳ ಆಚರಣೆ

    ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಅಥಣಿ ತಾಲೂಕಾಡಳಿತದಿಂದ ಭಾನುವಾರ ತಹಸೀಲ್ದಾರ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ತಹಸೀಲ್ದಾರ್ ದುಂಡಪ್ಪ ಕೋಮಾರ, ಉಪ ತಹಸೀಲ್ದಾರ್ ರಾಜು ಬುರ್ಲಿ, ವೀರಣ್ಣ ವಾಲಿ, ಎಸ್.ಎಸ್. ಮಾಕಾಣಿ, ಎಸ್.ಎಸ್. ಬಿರಾದಾರ, ಆರ್.ಡಿ. ಧರಿಗೌಡ, ಬಿ.ಎಸ್. ಯಾದವಾಡ, ಸಿದ್ಧಾರ್ಥ ಸಿಂಗೆ, ಅನಿಲ ಸೌದಾಗರ, ರಾಜು ಐಹೊಳೆ, ರಾವಸಾಬ ಐಹೊಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts