More

    ಮಹನೀಯರ ಸಾಧನೆ ತಿಳಿಯಲು ಅನುಕೂಲ: ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ

    ಸಿರಗುಪ್ಪ: ಶರಣರು, ಸಂತರು, ಮಹನೀಯರ ಜಯಂತಿಗಳ ಆಚರಣೆಯಿಂದ ಅವರ ಸಾಧನೆಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

    ನಗರದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಬಿಸಿಎಂ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಾಜಿ ಶೌರ್ಯ, ರಾಷ್ಟ್ರಭಕ್ತಿ, ಉತ್ತಮ ಆಡಳಿತದಿಂದ ಸ್ವಾಭಿಮಾನಿ ಹಿಂದು ರಾಷ್ಟ್ರ ಕಟ್ಟಿದ್ದರು. ಭಾರತದ ಧರ್ಮ ಸಂಸ್ಕೃತಿಗಳ ರಕ್ಷಣೆಗೆ ಶಿವಾಜಿ ಮಾಡಿದ ಕಾರ್ಯಗಳು ಮಹತ್ವದ್ದಾಗಿವೆ ಎಂದರು.

    ಸವಿತಾ ಮಹರ್ಷಿ ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಶರಣರಾಗಿದ್ದಾರೆ. ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬಲಿಷ್ಠವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು. ಮಹರ್ಷಿಗಳು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದು ಕರೆ ನೀಡಿದರು.

    ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಬಿಸಿಎಂ ಅಧಿಕಾರಿ ಗಾದಿಲಿಂಗಪ್ಪ ಮಾತನಾಡಿದರು. ತಾಪಂ ಉಪಾಧ್ಯಕ್ಷ ಶರಣಬಸವ, ಮುಖಂಡರಾದ ಅಬ್ದುಲ್‌ನಬೀ, ಶ್ಯಾಮ್, ವಿಜಯ್, ವೆಂಕಣ್ಣ, ಎಂ.ವೀರೇಶ, ಈರಣ್ಣ, ವೀರೇಶ, ಶಿವು, ವಿನೋದ, ವಿಜಯ್ ಹಾಗೂ ಸವಿತಾ ಸಮುದಾಯ ತಾಲೂಕು ಅಧ್ಯಕ್ಷ ರಾಘವೇಂದ್ರ, ಮುಖಂಡರಾದ ಡಿ.ಶ್ರೀನಿವಾಸ್, ಮರಿಸ್ವಾಮಿ, ಮಲ್ಲಿಕಾರ್ಜುನ, ಅಂಜಿನಿ, ಶ್ರೀನಿವಾಸ, ಸಾಯಿಬಣ್ಣ, ಶೇಖರ್, ಎಚ್.ಶ್ರೀನಿವಾಸ, ಎಂ.ಪ್ರಕಾಶ, ಸಿದ್ದ, ವೆಂಕಟೇಶ, ಶ್ರೀನಿವಾಸ, ಬಸವರಾಜ, ನಾಗರಾಜ, ನಾಗಪ್ಪ, ರಾಮು, ಹನುಮಂತಪ್ಪ, ಎಂ.ಶಿವು, ಬಿ.ಮಂಜುನಾಥ, ರಾಮಕೃಷ್ಣ, ಭೀಮ, ಬಸವರಾಜ, ಲಕ್ಷ್ಮೀಮೂರ್ತಿ, ಯಂಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts