More

    ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

    ಪುರಿ : ಭಗವಾನ್ ಶ್ರೀ ಜಗನ್ನಾಥನ 144ನೇ ವರ್ಷದ ರಥಯಾತ್ರೆಯು ಒಡಿಶಾದ ಪುರಿಯಲ್ಲಿ ಇಂದು ಆರಂಭವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ, ಕರೊನಾ ಹಿನ್ನೆಲೆಯಲ್ಲಿ, ಭಕ್ತಾದಿಗಳಿಗೆ ವೀಕ್ಷಣೆ ಅಥವಾ ಭಾಗವಹಿಸುವ ಅವಕಾಶವಿಲ್ಲದೆ ರಥಯಾತ್ರೆ ನಡೆಯುತ್ತಿದೆ.

    ಪುರಿಯ 12 ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದಿಂದ ಶ್ರೀ ಜಗನ್ನಾಥ ದೇವರು ತಮ್ಮ ಸೋದರರೊಂದಿಗೆ ಎರಡೂವರೆ ಕಿಲೋಮೀಟರ್​ ದೂರದಲ್ಲಿರುವ ಗುಂಡೀಚಾ ದೇವಾಲಯದ ಅತ್ತೆಯ ಮನೆಗೆ ಹೋಗುವುದನ್ನು ಆಚರಿಸಲು ಈ ರಥಯಾತ್ರೆಯನ್ನು ನಡೆಸಲಾಗುತ್ತದೆ ಎನ್ನಲಾಗಿದೆ.

    ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

    ದೇವರ ದರ್ಶನಕ್ಕಾಗಿ ಜನರು ರಸ್ತೆಯಲ್ಲಿ ಗುಂಪು ಸೇರುವುದನ್ನು ತಡೆಯಲು ರಥಯಾತ್ರೆಯ ಮಾರ್ಗದ 19 ಕಿಲೋಮೀಟರ್​ನಷ್ಟು ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶ್ರೀ ಜಗನ್ನಾಥ ದೇವಾಲದಿಂದ ಗುಂಡೀಚಾ ದೇವಾಲಯದವರೆಗಿನ 3 ಕಿಲೋಮೀಟರ್​ ಮಾರ್ಗದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ವಿಧಿಸಲಾಗಿದೆ.

    ರಥಯಾತ್ರೆಯ ಕಾರ್ಯದಲ್ಲಿ ತೊಡಗಿರುವ ಸುಮಾರು 2,800 ಪುರೋಹಿತರು ಮತ್ತು ಅಧಿಕಾರಿಗಳಿಗೆ ಎರಡೂ ಡೋಸ್​ ಕರೊನಾ ಲಸಿಕೆ ನೀಡಲಾಗಿದೆ. ಕರೊನಾ ಪರೀಕ್ಷೆ ನಡೆಸಿ, ನೆಗೆಟೀವ್ ವರದಿ ಬಂದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಥಯಾತ್ರೆಯ ಮುನ್ನ ಇವರೆಲ್ಲರಿಗೂ ಪ್ರತ್ಯೇಕವಾಗಿ ಸರ್ಕಾರಿ ವಸತಿ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

    ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts