More

  ಶ್ರೀರಂಗಪಟ್ಟಣದಲ್ಲಿ ಅದ್ದೂರಿ ಸಂವಿಧಾನೋತ್ಸವ

  ಶ್ರೀರಂಗಪಟ್ಟಣ: ಪ್ರಜ್ಞಾವಂತರ ವೇದಿಕೆ ವತಿಯಿಂದ ಪಟ್ಟಣದಲ್ಲಿ ಭಾನುವಾರ 5ನೇ ವರ್ಷದ ಸಂವಿಧಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

  ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವೃತ್ತದಲ್ಲಿನ ವಿಶ್ವಮಾನವ ಕುವೆಂಪು ಅವರ ಪುತ್ಥಳಿಗೆ ವೇದಿಕೆ ಸಂಸ್ಥಾಪಕ ಹಾಗೂ ವಕೀಲ ಸಿ.ಎಸ್.ವೆಂಕಟೇಶ್ ನೇತೃತ್ವದಲ್ಲಿ ಪುಷ್ಪನಮನ ಅರ್ಪಿಸಲಾಯಿತು.

  ಕೆಆರ್‌ಎಸ್ ರಾಜ್ಯ ಉಪಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಪ್ರಜೆಯ ಕೈಯಲ್ಲಿ ಪರಮಾಧಿಕಾರದ ಶಕ್ತಿಯನ್ನು ಸಂವಿಧಾನ ನೀಡಿದ್ದು, ಇದೇ ಈ ದೇಶದ ಮಹಾ ಗ್ರಂಥವಾಗಿದೆ. ಡಾ.ಅಂಬೇಡ್ಕರ್ ಅವರು ಯಾವುದೇ ಜಾತಿ, ಧರ್ಮ, ವರ್ಗ, ವ್ಯಕ್ತಿಗೆ ಪ್ರತಿಷ್ಠೆಯಾಗಿ ಈ ಕೃತಿ ರಚಿಸದೆ ಈ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರೂ ಸಹ ಸಾಯುವವರೆಗೂ ಸಮಾನ ನ್ಯಾಯ, ನೀತಿ, ನಿಯಮಗಳ ಪಾಲಿಸಲು ಸಂವಿಧಾನಿಕ ಶಕ್ತಿಯನ್ನು ನೀಡಿದ್ದಾರೆ. ಹೀಗಾಗಿ ಈ ದೇಶದ ನಾಗರಿಕರು ಕಡ್ಡಾಯವಾಗಿ ಸಂವಿಧಾನವನ್ನು ತಿಳಿದುಕೊಳ್ಳಬೇಕಿದೆ ಎಂದರು.

  ಬಳಿಕ ಸಂವಿಧಾನವನ್ನು ವಾಹನಗಳಲ್ಲಿ ಪ್ರತಿಷ್ಠಾಪಿಸಿ ಕುವೆಂಪು ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಸಂವಿಧಾನದ ಪೀಠಿಕೆಯನ್ನು ಪ್ರತಿಜ್ಞಾವಿಧಿಯಾಗಿ ಸ್ವೀಕರಿಸಲಾಯಿತು ವಕೀಲ ಸಿ.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು.

  ಕಾವೇರಿ ಸಂಸ್ಥೆಯ ಚೀರನಹಳ್ಳಿ ಲಕ್ಷ್ಮಣ್, ವಿಚಾರವಾದಿ ಯೋಗೀಶ್ ಮಾಸ್ತರ್, ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಯಮುನಾ, ಸಮಾನ ಮನಸ್ಕರ ವೇದಿಕೆಯ ಟಿ.ಡಿ.ನಾಗರಾಜು, ಗೋವಿಂದು, ಅಮ್ರೀನ್, ಬೌದ್ಧ ಮಹಾಸಭಾದ ಕೆ.ಟಿ.ರಂಗಯ್ಯ, ಮುಸ್ಲಿಂ ಒಕ್ಕೂಟ ಸೌರ್ಹದ ವೇದಿಕೆಯ ಗಂಜಾಂ ಬಾಬಣ್ಣ, ಮುಖಂಡ ಏಜಾಜ್ ಪಾಷಾ, ಬಿಎಸ್‌ಸಿ ಪಕ್ಷದ ಗೋವಿಂದರಾಜು, ಕ್ಯಾತನಹಳ್ಳಿ ಚಂದ್ರಣ್ಣ, ಪ್ರಿಂಟಿಂಗ್ ಸಿದ್ದಪ್ಪ, ಚಿಕ್ಕತಮ್ಮೇಗೌಡ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts