More

    ರಾಜ್ಯಾದ್ಯಂತ ಅರ್ಥಪೂರ್ಣ ಬಸವ ಜಯಂತಿ ಆಚರಣೆ: ಬಸವಣ್ಣನವರ ಪ್ರತಿಮೆಯೊಂದಿಗೆ ಅದ್ಧೂರಿ ಮೆರವಣಿಗೆ,ಜಾನಪದ ಕಲಾತಂಡಗಳ ಮೆರಗು

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

    ವಿಜಯನಗರ ಹಾಗೂ ಹೊಸಪೇಟೆಯಲ್ಲಿ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಸಾಮೂಹಿಕ ವಿವಾಹವಾಗಿರುವ 21 ಜೋಡಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ವಿಶೇಷ. ಜಾನಪದ ಕಲಾತಂಡಗಳು, ನಂದಿಕೋಲು, ಡೊಳ್ಳು ಕುಣಿತ ಸೇರಿದಂತೆ ಅನೇಕ ಕಲಾತಂಡಗಳು ಭಾಗಿಯಾಗಿದ್ದವು.

    ಬಳ್ಳಾರಿಯಲ್ಲಿ ಬಸವಣ್ಣನವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಗವಿಯಪ್ಪ ಸರ್ಕಲ್ ಬಳಿ ಇರುವ ಬಸವೇಶ್ವರ ಪುತ್ತಳಿಗೆ ಶಾಸಕ ಸೋಮಶೇಕರ ರೆಡ್ಡಿ ಅವರಿಂದ ಮಾಲಾರ್ಪಣೆ ಮಾಡಲಾಯಿತು.

    12 ಗಂಟೆಗೆ ನಗರದ ಬಸವ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಇನ್ನು ಬಾಗಲಕೋಟೆ ಬನಹಟ್ಟಿಯಲ್ಲಿ ಬಸವ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಿಂದ ಮೆರವಣಿಗೆ ಆರಂಭವಾಯಿತು. ವಚನ ಗ್ರಂಥ ತಲೆ ಮೇಲೆ ಹೊತ್ತುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಕುಂದಾನಗರಿ ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಬಸವ ಜಯಂತಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ರಾಮತೀರ್ಥ ನಗರ ವೀರಭದ್ರೇಶ್ವರ ಕಮೀಟಿ ವತಿಯಿಂದ ಅದ್ಧೂರಿ ಬಸವ ಜಯಂತಿ ಆಚರಿಸಲಾಯಿತು.

    ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವಿಟ್ಟು ತೆರೆದ ವಾಹನದಲ್ಲಿ ಮೆರವಣಿಗೆಯುದ್ಧಕ್ಕೂ ಮನೆ ಎದುರು ವಾಹನ ಬರುತ್ತಿದ್ದಂತೆ ಮಹಿಳೆಯೆರು ಮಕ್ಕಳು ಭಕ್ತಿ ಭಾವದಿಂದ ನಮಸ್ಕರಿಸಿದ ದೃಶ್ಯಗಳು ಕಂಡುಬಂದವು.

    ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಳಿ, ಸ್ಥಳೀಯ ಬಿಜೆಪಿ ಮುಖಂಡ ಈರಯ್ಯ ಖೋತ, ಸಾಮಾಜಿಕ ಕಾರ್ಯಕರ್ತ ಸುರೇಶ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.

    ಮಂಡ್ಯ ಡಿಸಿ ಕಚೇರಿಯಿಂದ ಬೃಹತ್ ಮೆರವಣಿಗೆ ಕೈಗೊಳ್ಳಲಾಗಿತ್ತು. ಬಸವಣ್ಣ ಭಾವಚಿತ್ರಕ್ಕೆ ಡಿಸಿ ಎಸ್.ಅಶ್ವಥಿ.ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಹಲವು ಕಲಾತಂಡಗಳ ಮೆರಗು ನೀಡಿದವು.

    ಅತಿ ಹೆಚ್ಚು ಜನನಿಬಿಡ, ವಿಶ್ವದಲ್ಲೇ ದಿಲ್ಲಿ ವಿಮಾನ ನಿಲ್ದಾಣಕ್ಕೆ 2ನೇ ಸ್ಥಾನ: ಇನ್ನೆರಡು ನಿಲ್ದಾಣಗಳ ಹೆಸರು ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts