More

    ಪೊಲೀಸ್ ಕಾವಲಿನಲ್ಲಿ ಅಭ್ಯರ್ಥಿಗಳ ಭವಿಷ್ಯ

    ಚಿತ್ರದುರ್ಗ:ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚಿತ್ರದುರ್ಗ,ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ 100 ಗ್ರಾಪಂಗಳ 1588 ಸ್ಥಾನಗಳಿಗೆ ನಡೆ ದ ಚುನಾವಣೆಯಲ್ಲಿ ಶೇ.86.65 ಮತದಾನವಾಗಿದೆ. ಚಿತ್ರದುರ್ಗ-ಶೇ.86.50,ಹೊಸದುರ್ಗ ಶೇ.86.75 ಹಾಗೂ ಹೊಳಲ್ಕೆರೆಯಲ್ಲಿ ಶೇ.86.75 ಮತದಾನವಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿರುವ ಭದ್ರತಾ ಕೊಠಡಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸ ಲಾಗಿದ್ದು,ಇಲ್ಲಿರುವ ಮತಪೆಟ್ಟಿಗೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

    ಚಿತ್ರದುರ್ಗ ತಾಲೂಕಿನ 38,ಹೊಸದುರ್ಗ-33 ಹಾಗೂ ಹೊಳಲ್ಕೆರೆ ತಾಲೂಕಿನ 29 ಗ್ರಾಪಂಗಳ 1753 ಸ್ಥಾನಗಳಿಗೆ ಡಿ.22ರಂದು ಚುನಾವಣೆ ಘೋಷಣೆಯಾಗಿತ್ತು. ಆದರೆ ಇವುಗಳ ಪೈಕಿ 158 ಸ್ಥಾನಗಳಿಗೆ ಅವಿರೋಧ ಆಯ್ಕೆ ಹಾಗೂ 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಯಾಗಿರಲಿಲ್ಲ. ಚಿತ್ರದುರ್ಗ,ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳಲ್ಲಿ 527485 ಮತದಾರರ ಪೈಕಿ 234685 ಪುರುಷ,222 412 ಮಹಿಳೆ ಹಾಗೂ ಇತರೆ 2 ಮತದಾರರು ಸಹಿತ 457099 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

    ಭದ್ರತಾ ಕೊಠಡಿಗಳು: ಚಿತ್ರದುರ್ಗ ತಾಲೂಕಿನ 38 ಗ್ರಾಪಂಗಳ ಮತಪೆಟ್ಟಿಗೆಗಳು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು(ಹೊಸ ಕಟ್ಟಡ),ಹೊಸದುರ್ಗ ತಾಲೂಕಿನ 33 ಗ್ರಾಪಂಗಳ ಹೊಸದುರ್ಗದ ತಾಯಮ್ಮ ಸದ್ದಿವಾಲ್ ಲಿಂಗಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹೊಳಲ್ಕೆರೆ ತಾಲೂಕಿನ 29 ಗ್ರಾಪಂಗಳ ಮತಪೆಟ್ಟಿಗೆಗಳು ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾಕೊಠಡಿಗಳಲ್ಲಿವೆ. ಚಿತ್ರದುರ್ಗದಲ್ಲಿ ಮಂಗಳವಾರ ರಾತ್ರಿ ಡಿ-ಮಸ್ಟರಿಂಗ್ ಪೂರ್ಣಾನಂತರ ಡಿಸಿ ಕವಿತಾ ಎಸ್.ಮನ್ನಿಕೇರಿ-ಎಸ್ಪಿ ಜಿ.ರಾಧಿಕಾ ಉಸ್ತುವಾರಿಯ ಲ್ಲಿ 2 ಭದ್ರತಾಕೊಠಡಿಗಳಿಗೆ ಬೀಗಮುದ್ರೆ ಹಾಕಲಾಯಿತು.
    ಮತದಾನದ ವಿವರ
    ತಾಲೂಕು-ಪುರುಷರು-ಮಹಿಳೆಯರು-ಇತರೆ-ಒಟ್ಟು
    ಚಿತ್ರದುರ್ಗ-92726-89331-2-182059
    ಹೊಸದುರ್ಗ-73236-68557-ಇಲ್ಲ-141793
    ಹೊಳಲ್ಕೆರೆ-68723-64524-ಇಲ್ಲ-133247


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts