More

    ಸದಸ್ಯರು ಸಮರ್ಥವಾಗಿ ಆಡಳಿತ ನಡೆಸಲಿ ಎಂದು ಸಲಹೆ ನೀಡಿದ ಗಂಗಾವತಿ ತಾಪಂ ಅಧ್ಯಕ್ಷ ಮಹ್ಮದ್ ರಫಿ

    ಗಂಗಾವತಿ: ಪಂಚಾಯತ್ ರಾಜ್ ಇಲಾಖೆ ನಿಯಮಾವಳಿಯಂತೆ ಅರ್ಹರಿಗೆ ಯೋಜನೆಗಳು ತಲುಪಲಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫಿ ಸಲಹೆ ನೀಡಿದರು.

    ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗ್ರಾಪಂ ನೂತನ ಸದಸ್ಯರಿಗೆ ಮಂಗಳವಾರ ಆಯೋಜಿಸಿದ್ದ ಐದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಧಿಕಾರಿ ವಿಕೇಂದ್ರಿಕರಣ ಹಿನ್ನೆಲೆಯಲ್ಲಿ ಗ್ರಾಪಂಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರವಿದೆ. ಅದನ್ನು ಹೊಸ ಸದಸ್ಯರು ಸಮರ್ಥವಾಗಿ ನಿಭಾಯಿಸಬೇಕು ಎಂದರು.

    ತಾಪಂ ಇಒ ಡಾ.ಮೋಹನ್ ಮಾತನಾಡಿ, ಮಂಥನ ಸಭಾಂಗಣ ಮತ್ತು ಸಾಮರ್ಥ್ಯ ಸೌಧದಲ್ಲಿ ತರಬೇತಿ ಆಯೋಜಿಸಲಾಗಿದೆ. ಕನಕಗಿರಿ, ಗಂಗಾವತಿ ಮತ್ತು ಕಾರಟಗಿ ತಾಲೂಕಿನ ಗ್ರಾಪಂ ಸದಸ್ಯರು ಭಾಗವಹಿಸಲಿದ್ದಾರೆ ಎಂದರು. ವಿವಿಧ ಗ್ರಾಪಂ ಅಧ್ಯಕ್ಷರಾದ ಕರಿಯಪ್ಪ, ಹರೀಶ ಘಂಟಾ, ಕೆ.ತಿಮ್ಮಪ್ಪ ಬಾಳಿಕಾಯಿ, ಮಂಜಮ್ಮ, ನರೇಗಾ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಇತರರಿದ್ದರು.

    ಹೊಸದಾಗಿ ಆಯ್ಕೆಯಾದ ಸದಸ್ಯರ ಸ್ವಾಗತಕ್ಕಾಗಿ ಮಂಥನ ಮತ್ತು ಸಾಮರ್ಥ್ಯ ಸೌಧವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ವೇದಿಕೆಯನ್ನೂ ವಿಶಿಷ್ಟ ರೀತಿಯಲ್ಲಿ ರೂಪಿಸಲಾಗಿತ್ತು. ಉಪಗ್ರಹಧಾರಿತ ತರಬೇತಿ ಕಾರ್ಯಾಗಾರದಲ್ಲಿ ಎಲ್ಲ ಸದಸ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts