More

    ಗ್ರಾಮಸಭೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಅವಶ್ಯ

    ಪಡುಬಿದ್ರಿ: ಗ್ರಾಮಸಭೆಯಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಪಾಲಕರಲ್ಲಿ ಸರಿಯಾಗಿ ಅರಿವು ಮೂಡಿಸಬೇಕು ಎಂದು ಪಲಿಮಾರು ಗ್ರಾಪಂ ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು ಹೇಳಿದರು.

    ಪಲಿಮಾರು ಗ್ರಾಪಂ ಸಭಾಂಗಣದಲ್ಲಿ ಬುಧವಾರಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
    ಗ್ರಾಪಂ ಕ್ರಿಯಾಯೋಜನೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ, ಶಾಲೆಗೆ ಲಭ್ಯವಿರುವ ಸೌಲಭ್ಯ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯ, ಕೋಟೆ ಹೌಸ್ ಬಳಿಯ ಖಾಸಗಿಯವರಿಗೆ ಸೇರಿದ ಗುಡ್ಡ ಕುಸಿತವಾಗುವ ಆತಂಕ, ಘನ ತ್ಯಾಜ್ಯ ನಿರ್ವಹಣೆ, ಬಿಪಿಎಲ್ ಕಾರ್ಡ್‌ಗಿರುವ ಮಾನದಂಡಗಳ ಬಗ್ಗೆ, ಆಡ್ವೆ ಶಾಲೆ ಹಿಂಬದಿ ತೋಡು ಹೂಳು ತುಂಬಿ ಮಳೆಗಾಲದಲ್ಲಾಗುವ ಸಂಕಷ್ಟ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಸತೀಶ್, ಗ್ರಾಪಂನ ಇತಿಮಿತಿಯೊಳಗೆ ಪರಿಹರಿಸುವ ಭರವಸೆ ನೀಡಿದರು.

    ಅಡ್ವೆ ಕ್ಲಸ್ಟರ್ ಸಮೂಹ ಸಂಪನ್ಮೂಲ ಕೇಂದ್ರದ ಕವಿತಾ ಮಾತನಾಡಿದರು. ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯ ದಿನೇಶ್ ಪಲಿಮಾರು, ಗ್ರಾಪಂ ಉಪಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಮಕ್ಕಳ ಸಹಾಯವಾಣಿ ಪ್ರಮೋದ್, ಜಯಂತಿ ಶೆಟ್ಟಿ ಮಾತನಾಡಿದರು. ಪಲಿಮಾರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಾಯಕಿ ನಿಶಾ ಅಧ್ಯಕ್ಷತೆ ವಹಿಸಿದ್ದರು. ಉಪನಾಯಕ ಸುಜಿತ್, ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಆಶಾ, ಗ್ರಾಪಂ ಸದಸ್ಯರಾದ ರಾಯೇಶ್ವರ ಪೈ, ಪ್ರವೀಣ್ ಕುಮಾರ್, ಯೋಗಾನಂದ, ಶಿವರಾಮ ಪೂಜಾರಿ, ಮಹೇಶ್ ಶೆಟ್ಟಿ, ಸತೀಶ್ ದೇವಾಡಿಗ, ಸುಮಂಗಲಾ ಎಲ್.ದೇವಾಡಿಗ, ಪ್ರಿಯಾ ಕೆ.ಶೆಟ್ಟಿ, ರಶ್ಮಿ, ಜಯಶ್ರೀ, ಅಮಿತ ಪೂಜಾರಿ, ಸುಜಾತ, ಜಯಂತಿ ಉಪಸ್ಥಿತರಿದ್ದರು.

    ಗ್ರಾಮಸಭೆ ಖಾಲಿ ಖಾಲಿ
    ಮಹಿಳಾ ಜನಪ್ರತಿನಿಧಿಗಳು ಹೆಚ್ಚಿರುವ ಪಲಿಮಾರು ಗ್ರಾಪಂನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಹಾಗೂ ಅಂಗನವಾಡಿ ಶಿಕ್ಷಕಿಯರ ಸಹಿತ ಆರೋಗ್ಯ ಕಾರ್ಯಕರ್ತೆಯರು ಭಾಗವಹಿಸಿದ್ದರೆ, ಗ್ರಾಮದ ಇತರ ಯಾರೊಬ್ಬ ಮಹಿಳೆಯರು ಪಾಲ್ಗೊಂಡಿರಲಿಲ್ಲ. ಮೂರು ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದು, ನೋಡೆಲ್ ಅಧಿಕಾರಿ ಸಹಿತ ಹಲವು ಇಲಾಖೆ ಅಧಿಕಾರಿಗಳು ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts