More

    ಗ್ರಾಪಂ ಚುನಾವಣೆ ಸಿದ್ಧತಾ ಕಾರ್ಯ ಆರಂಭ

    ಬಂಟ್ವಾಳ: ಗ್ರಾಪಂ ಚುನಾವಣೆ ಹಿನ್ನೆಲೆ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಶಾಖೆಯಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಮತದಾರರ ಪಟ್ಟಿ, ಮತಗಟ್ಟೆಗಳ ಸಿದ್ಧತೆ ಜತೆಗೆ ಬ್ಯಾಲೆಟ್ ಬಾಕ್ಸ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿದೆ.
    ತಾಲೂಕಿನ 58 ಗ್ರಾಪಂಗಳ ಪೈಕಿ 57 ಗ್ರಾಪಂಗಳ ಅವಧಿ ಮುಗಿದಿದ್ದು, ಪುದು ಗ್ರಾಪಂಗೆ ಈಗ ಚುನಾವಣೆ ನಡೆಯುವುದಿಲ್ಲ. ತಾಲೂಕಿನಲ್ಲಿ ಫೆಬ್ರವರಿ 7ರವರೆಗೆ ಒಟ್ಟು 3,32,662 ಮತದಾರರಿದ್ದು, ಸದ್ಯದ ಆದೇಶದ ಪ್ರಕಾರ ಅ.10ರೊಳಗೆ ಅರ್ಜಿ ಸಲ್ಲಿಸಿ ಸೇರ್ಪಡೆಗೊಂಡವರು ಗ್ರಾಪಂ ಮತದಾನದ ಹಕ್ಕು ಪಡೆಯಲಿದ್ದಾರೆ.

    ಒಟ್ಟು 57 ಮಂದಿ ಚುನಾವಣಾಧಿಕಾರಿಗಳು(ಆರ್‌ಒ) ಹಾಗೂ 61 ಮಂದಿ ಸಹಾಯಕ ಚುನಾವಣಾಧಿಕಾರಿಗಳು(ಎಆರ್‌ಒ)ಗಳು ನೇಮಕಗೊಂಡಿದ್ದಾರೆ. ಪ್ರಸ್ತುತ ಚುನಾವಣಾ ಶಾಖೆ ಹಾಗೂ ತಾಲೂಕು ಕಚೇರಿಯ ಹೆಚ್ಚಿನ ಸಿಬ್ಬಂದಿ ಚುನಾವಣಾ ಸಿದ್ಧತಾ ಕರ್ತವ್ಯದಲ್ಲಿದ್ದು, ಮುಂದಿನ ದಿನಗಳಲ್ಲಿ ವಾಹನಗಳ ನಿಯೋಜನೆ, ಸಿಬ್ಬಂದಿ ನೇಮಕ, ನೀತಿ ಸಂಹಿತೆ ಮೊದಲಾದ ಕರ್ತವ್ಯಗಳ ನಿರ್ವಹಣೆಗೆ ನಿಗದಿತ ಸಿಬ್ಬಂದಿ ಜವಾಬ್ದಾರಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಾವಿರಕ್ಕೆ ಒಂದು ಮತಗಟ್ಟೆ: ತಾಲೂಕಿನಲ್ಲಿ ಉಪಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳಿದ್ದು, ಅದರ ಶೇ.10ರಷ್ಟು ಹೆಚ್ಚುವರಿಯಾಗಿ ಬ್ಯಾಲೆಟ್ ಬಾಕ್ಸ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಹಿಂದೆ ಗರಿಷ್ಠ 1400 ಮತದಾರರಿಗೆ ಒಂದು ಮತಗಟ್ಟೆಯಂತೆ 306 ಮತಗಟ್ಟೆಗಳಿದ್ದವು, ಆದರೆ ಪ್ರಸ್ತುತ ಕೋವಿಡ್-19 ಕಾರಣದಿಂದ ಅದನ್ನು ಒಂದು ಸಾವಿರಕ್ಕೆ ಇಳಿಸಲಾಗಿದ್ದು, ಹೀಗಾಗಿ 90 ಉಪಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ.

    ಗ್ರಾಪಂ ಚುನಾವಣೆ ದೃಷ್ಟಿಯಿಂದ ಎಲ್ಲ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಮಾಹಿತಿಯ ದೃಷ್ಟಿಯಿಂದ ಬಿಎಲ್‌ಒಗಳ ಹೆಸರು, ಮೊಬೈಲ್ ಸಂಖ್ಯೆಯನ್ನು ಗ್ರಾಪಂ ಕಚೇರಿಯಲ್ಲಿ ಡಿಸ್‌ಪ್ಲೇ ಮಾಡಲು ಸೂಚನೆ ನೀಡಲಾಗಿದೆ.
    -ರಾಜೇಶ್ ನಾಕ್, ಉಪತಹಸೀಲ್ದಾರ್, ಚುನಾವಣಾ ಶಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts