More

    ಗ್ರಾ.ಪಂ. ಚುನಾವಣೆ: ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿ ವರ್ಗಾವಣೆಗೆ ಬ್ರೇಕ್

    ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ/ಸಿಬ್ಬಂದಿ ವರ್ಗಾವಣೆ ಮಾಡದಂತೆ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿದೆ.

    ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲೇ ಮುಗಿದಿದ್ದು, ಕೋರ್ಟ್, ಕರೊನಾ ಅಸಾಧಾರಣ ಪರಿಸ್ಥಿತಿ ಕಾರಣಗಳಿಂದ ಚುನಾವಣೆ ಮುಂದೂಡಲಾಗಿತ್ತು. ಈಗ ಮೀಸಲಾತಿ ಪಟ್ಟಿ ಕೂಡ ಪ್ರಕಟವಾಗಿದ್ದು, ಆಯೋಗ ಚುನಾವಣೆಗೆ ಎಲ್ಲ ಸಿದ್ಧತೆ ನಡೆಸಿದೆ.

    ಮತದಾರರ ಪಟ್ಟಿ ಕೂಡ ಸಿದ್ಧಗೊಂಡಿದೆ. ಮತಗಟ್ಟೆ ಗುರುತಿಸುವಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಕಾರ್ಯಗಳಿಗೆ ತೊಡಕಾಗದಂತೆ ಸೆ.25ರ ನಂತರ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆ ಆದೇಶ ಹೊರಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣೆ ಅಧೀನ ಕಾರ್ಯದರ್ಶಿಗಳು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

    ಅಕ್ಟೋಬರ್‌ನಲ್ಲಿ ಎಲೆಕ್ಷನ್?:
    ರಾಜ್ಯದಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಂಬಂಧ 2020ರ ಅಕ್ಟೋಬರ್ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ. ಜತೆಗೆ ವಾರ್ಡ್‌ಗಳ ಮೀಸಲಾತಿ, ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದು, ಚುನಾವಣೆ ಎಲ್ಲ ತಯಾರಿ ನಡೆಸಿದೆ.

    ರಾಜಕೀಯ ಚಟುವಟಿಕೆಗಳು ಬಿರುಸು:
    ಒಂದೆಡೆ ರಾಜ್ಯ ಚುನಾವಣಾ ಆಯೋಗ ಗ್ರಾ.ಪಂ. ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ರಾಜಕೀಯ ನಾಯರು ಸಹ ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಗ್ರಾ.ಪಂ. ಚುನಾವಣೆ ಕಡೆಗೆ ಗಮನಹರಿಸಿವೆ.

    ಕಾರು ತಡೆದ ಪೊಲೀಸರಿಗೆ ಸಿಕ್ಕಿದ್ದು ರಾಶಿ ರಾಶಿ ಹಣ: ಒಟ್ಟು ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts