More

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಯಲ್ಲಿರಲಿದೆ.

    ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಡಿಸೆಂಬರ್​ 22 ಹಾಗೂ ಎರಡನೇ ಹಂತದ ಚುನಾವಣೆ ಡಿ.27ಕ್ಕೆ ನಿಗದಿಯಾಗಿದೆ. ಡಿ. 30ರಂದು ಮತಎಣಿಕೆ ನಡೆಯಲಿದೆ. ಇಂದಿನಿಂದ ಡಿ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೋವಿಡ್ ನಿಯಮ ಪಾಲಿಸಿ, ಭಯವಿಲ್ಲದೆ ಮತದಾನ‌ ಮಾಡಲು ಮನವಿ ಮಾಡಿದರು.

    ಪ್ರತಿ ಜಿಲ್ಲೆಯಲ್ಲೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನವಾಗಲಿದೆ. 5762 ಗ್ರಾಮ ಪಂಚಾಯಿತಿಗಳ 92,121 ಸದಸ್ಯ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 1,49,71,676 ಪುರುಷರು ಮತ್ತು 1,47,41,964 ಮಹಿಳೆಯರು ಸೇರಿ ಒಟ್ಟು 2,96,15,048 ಮತದಾರರಿದ್ದಾರೆ. ಬೀದರ್​ ಜಿಲ್ಲೆಯಲ್ಲಿ ಮಾತ್ರ ಇವಿಎಂ ಮೂಲಕ ಮತ ಚಲಾವಣೆ ನಡೆಯಲಿದ್ದು, ಬೇರೆ ಜಿಲ್ಲೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ.

    ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ಹೊಸ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಬ್ರೇಕ್ ಬೀಳಲಿದೆ.

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

    ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೊಂದು ಮತ ಸಮರಕ್ಕೆ ಇಳಿಯಲಿವೆ. ಬಿಜೆಪಿ ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ. ಜೆಡಿಎಸ್ ಕೂಡ ಪ್ರಮುಖರ ಸಭೆ ನಡೆಸಿ ತೊಡೆ ತಟ್ಟಲು ರೆಡಿಯಾಗಿದೆ. ಕಾಂಗ್ರೆಸ್ ಈಗ ತಾನೆ ಚುನಾವಣಾ ತಯಾರಿಗೆ ಮುಂದಾಗಿದೆ.

    ಸುಮಾರು 5800 ಗ್ರಾಮ ಪಂಚಾಯಿತಿಗಳ 85000 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಈ ಚುನಾವಣೆ ಪ್ರಮುಖ‌ ಪಾತ್ರವಹಿಸಲಿದೆ. ಹಾಗಾಗಿ ಈ ಚುನಾವಣೆಯನ್ನು ಮೂರು ರಾಜಕೀಯ ಪಕ್ಷಗಳು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಳ್ಳಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts