More

    ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕುಕ್ಕರ್​ ಹಂಚಿಕೆ

    ಹಾವೇರಿ: ಹಾನಗಲ್​ ಬೈಎಲೆಕ್ಷನ್ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಇದ್ದರೂ, ಗ್ರಾಮ ಪಂಚಾಯಿತಿ ವತಿಯಿಂದ ಜನರಿಗೆ ಕುಕ್ಕರ್​ ಹಂಚಿರುವ ಪ್ರಸಂಗ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚುವಳ್ಳಿ ಗ್ರಾಮದಲ್ಲಿ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಬೆಂಬಲಿಗರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಬೈಚುವಳ್ಳಿ ಗ್ರಾಮ ಪಂಚಾಯತಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಶೇಕಡಾ 5 ರ ಅನುದಾನದಲ್ಲಿ ದಿವ್ಯಾಂಗರಿಗೆ ಕುಕ್ಕರ್ ಹಂಚಿಕೆ ಮಾಡಿದೆ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ತಾವೇ ಠರಾವ್ ಮಾಡಿಕೊಂಡು ತಾವೇ ಮನೆಮನೆಗೆ ಹೋಗಿ ಕುಕ್ಕರ್ ವಿತರಣೆ ಮಾಡಿದ್ದಾರೆ. ನಿನ್ನೆ ಸರ್ಕಾರಿ ರಜೆ ಇದ್ದರೂ ಗ್ರಾ.ಪಂ. ಸಿಬ್ಬಂದಿ ಕುಕ್ಕರ್ ​ಹಂಚಿಕೆಯ ಕೆಲಸ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ಹೈಟೆಕ್​ ಡ್ರಗ್ಸ್​ ಪಾರ್ಟಿ ಪ್ರಕರಣ: ಶಾರುಖ್​ ಪುತ್ರನ ಬಂಧನ ಸಾಧ್ಯತೆ..!

    ನಾಗರಾಜ್ ರಜಪೂತ್ ಎಂಬ ಪಿಡಿಓರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧಿಕಾರಿಗಳ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

    ಅಕ್ಕಿನೇನಿ ಕುಟುಂಬ ನೀಡಲು ಮುಂದಾದ ಜೀವನಾಂಶ ಎಷ್ಟು ಗೊತ್ತಾ?! ಏನೆಂದರು ಸಮಂತಾ?

    VIDEO| ಮಹಾತ್ಮ ಗಾಂಧಿ ಚಿತ್ರ, ಸಂದೇಶಗಳೊಂದಿಗೆ ಕಂಗೊಳಿಸಿದ ಬುರ್ಜ್​ ಖಲೀಫ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts